ಬಿಜೆಪಿಯವರಿಂದ ಮೀಸಲಾತಿ ಪಾಠ ಕಲಿಯಬೇಕಾಗಿಲ್ಲ. ಸಾಮಾಜಿಕ ನ್ಯಾಯದಂತೆ ಅಡಳಿತ ನಡೆಸುವವರು ನಾವು ಎಂದು ಬಿಜೆಪಿ ಮುಖಂಡರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಜನಸಂಖ್ಯೆಗನುಗುಣವಾಗಿ ಮೀಸಲಾತಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ಸಾಮಾಜಿಕ ನ್ಯಾಯದಂತೆ ಒಂದೇ ಒಂದು ಮೀಸಲಾತಿಯನ್ನು ಜಾರಿಗೊಳಿಸಿದ್ದು ತೋರಿಸಿದಲ್ಲಿ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಿಪಕ್ಷಗಳಿಗೆ ಸವಾಲ್ ಹಾಕಿದರು.
ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ತಿದ್ದುಪಡಿ ಕುರಿತಂತೆ ಎರಡು ಸದನಗಳಲ್ಲಿ ಒಪ್ಪಿಗೆ ಪಡೆದ ನಂತರ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು. ಸಾಮಾಜಿಕ ಶಿಕ್ಷಣ ಮೀಸಲಾತಿ ವರದಿ ಡಿಸೆಂಬರ್ ಅಂತ್ಯಕ್ಕೆ ಅಥವಾ ಜನೆವರಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ವರದಿ ಬಿಡುಗಡೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.