Select Your Language

Notifications

webdunia
webdunia
webdunia
webdunia

ನೈಟ್ ಕರ್ಫ್ಯೂ ಅಗತ್ಯ ಇಲ್ಲ?

ನೈಟ್ ಕರ್ಫ್ಯೂ ಅಗತ್ಯ ಇಲ್ಲ?
ಉಡುಪಿ , ಮಂಗಳವಾರ, 4 ಜನವರಿ 2022 (15:37 IST)
ಉಡುಪಿ : ನೈಟ್ ಕರ್ಫ್ಯೂವಿನಿಂದ ಕೊರೊನಾ ನಿಯಂತ್ರಣವಾಗುತ್ತದೆ ಎನ್ನಲು ಸಾಧ್ಯವಿಲ್ಲ. ನ್ಯೂ ಇಯರ್ ಆಚರಣೆ ವೇಳೆ ನಿಯಮ ವಿಧಿಸಲಾಗಿತ್ತು.

ಆದರೆ ನೈಟ್ ಕರ್ಫ್ಯೂ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಅಭಿಪ್ರಾಯ ಹೇಳಿದ್ದಾರೆ. ನೈಟ್ ಕರ್ಫ್ಯೂ ಮಾಡದಿದ್ದರೆ ಜನ ಅನಗತ್ಯವಾಗಿ ಓಡಾಡುತ್ತಿದ್ದರು. ಇದರಿಂದ ಕೊರೊನಾ ಇನ್ನೂ ಇದೆ ಎನ್ನುವುದು ಜನರ ಅರಿವಿಗೆ ಬರುತ್ತದೆ.

ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾದರೂ ಅದರ ತೀವ್ರತೆ ಇಲ್ಲ. ಎಲ್ಲರಿಗೂ ಆಸ್ಪತ್ರೆ, ಆಕ್ಸಿಜನ್ ಬೇಕಾದರೆ ಸಮಸ್ಯೆಯಾಗುತ್ತದೆ. ಕೇವಲ ಕೊರೊನಾದಿಂದ ಯಾವುದೇ ಅಪಾಯ ಇಲ್ಲ. ಸರ್ಕಾರ ಹಾಗೂ ತಜ್ಞರ ಮೇಲೆ ವಿಶ್ವಾಸ ಇರಿಸಬೇಕು. ಅವರು ನಮ್ಮ ಒಳ್ಳೆಯದಕ್ಕೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.


 


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಖಾಸಗಿ ಲ್ಯಾಬ್ ಎಡವಟ್ಟು