Publish Date: Tue, 03 Apr 2018 (09:46 IST)
Updated Date: Tue, 03 Apr 2018 (09:47 IST)
ಹಾವೇರಿ: ಕಾಗಿನೆಲೆಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿರುವ ಹಿಂದುಳಿದ ವರ್ಗದವರ ಸಮಾವೇಶದಲ್ಲಿ ಊಟೋಪಚಾರ ನಡೆಯಲ್ಲ.
ಸಮಾವೇಶಕ್ಕೆ 2 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಬಿಜೆಪಿ ಹೇಳಿದೆ. ಇದಕ್ಕಾಗಿ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಬಿಸಿಲಿನ ಬೇಗೆಗೆ ಊಟೋಪಚಾರ ಸಿಗಬಹುದೆಂದು ನಿರೀಕ್ಷೆ ಮಾಡಿದರೆ ನಿರಾಶೆಯಾಗಲಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮಾವೇಶದಲ್ಲಿ ಭರ್ಜರಿ ಭೋಜನ, ಹಣ ಹಂಚುವ ಕಾರ್ಯಕ್ರಮವಿಟ್ಟುಕೊಂಡರೆ ಕೇಸ್ ದಾಖಲಾಗಬಹುದೆಂದು ಈ ವ್ಯವಸ್ಥೇ ಕಲ್ಪಿಸಲಾಗಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ