ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ನಿವಾಸದ ನಿರ್ಮಾಣಕ್ಕೆ ಸಂಬಂಧಿಸಿದ ಅಕ್ರಮಗಳ ಕುರಿತು ಸಿಬಿಐನ ಪ್ರಾಥಮಿಕ ತನಿಖೆಯನ್ನ ನಿನ್ನೆ ಸ್ವಾಗತಿಸಿದ್ದಾರೆ. ಇಂತಹ ಆರೋಪಗಳೆಲ್ಲ ಆಧಾರ ರಹಿತವಾಗಿರುವುದರಿಂದ ತನಿಖೆಯಲ್ಲಿ ಯಾವುದೇ ಅಕ್ರಮ ಪತ್ತೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ ಕೇಜ್ರಿವಾಲ್, ನಾಲ್ಕನೇ ಪಾಸ್ ರಾಜನಿಂದ ಇನ್ನೇನು ನಿರೀಕ್ಷಿಸಬಹುದು ಅವರು ಎಷ್ಟೇ ನಕಲಿ ತನಿಖೆ ಅಥವಾ ಪ್ರಕರಣಗಳನ್ನು ಮುಂದುವರಿಸಿದರೂ ನಾನು ಅವರ ಮುಂದೆ ತಲೆಬಾಗುವುದಿಲ್ಲ ಎಂದು ಎಎಪಿ ನಾಯಕ ಕೇಜ್ರಿವಾಲ್ ಕಿಡಿಕಾರಿದ್ದಾರೆ.