Select Your Language

Notifications

webdunia
webdunia
webdunia
webdunia

ಟೋಲ್ ದರ ಏರಿಕೆ: ವಾಹನ ಸವಾರರಿಗೆ ನೈಸ್ ಶಾಕ್

ಟೋಲ್ ದರ ಏರಿಕೆ: ವಾಹನ ಸವಾರರಿಗೆ ನೈಸ್ ಶಾಕ್
ಬೆಂಗಳೂರು , ಬುಧವಾರ, 5 ಜುಲೈ 2017 (17:17 IST)
ವಾಹನ ಸವಾರರಿಗೆ ನೈಸ್ ಸಂಸ್ಥೆ ನೈಸಾಗಿಯೇ ಶಾಕ್ ನೀಡಿದೆ. ನೈಸ್ ಟೋಲ್ ದರದಲ್ಲಿ ಇಂದಿನಿಂದ ಜಾರಿಗೆ ಬರುವಂತೆ ಶೇ.20 ರಷ್ಟು ಹೆಚ್ಚಳಗೊಳಿಸಿ ಅಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
 
ಟೋಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡ ನೈಸ್ ಸಂಸ್ಥೆಯ ಅಧಿಕಾರಿಗಳು ,ಕಳೆದ ನಾಲ್ಕು ವರ್ಷಗಳಿಂದ ಟೋಲ್ ದರದಲ್ಲಿ ಏರಿಕೆ ಮಾಡಿರಲಿಲ್ಲ. ವಾರ್ಷಿಕ ಶೇ.10 ರಷ್ಟು ಎಂದಾದರೂ ಶೇ. 40 ರಷ್ಟು ದರ ಏರಿಕೆಯಾಗಬೇಕು. ಆದರೆ, ನಾವು ಕೇವಲ ಶೇ.20 ರಷ್ಟು ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
 
ಕಾರು ದರವನ್ನು 26 ರೂ.ನಿಂದ 31 ರೂ.ಗೆ, ಬಸ್‍ ದರ 70 ರೂ.ನಿಂದ 84 ರೂ.ಗೆ, ಲಾರಿಗಳಿಗೆ 45 ರೂ. ಇದ್ದ ದರ 54 ರೂ.ಗೆ ಹಾಗೂ ದ್ವಿಚಕ್ರ ವಾಹನಗಳಿಗೆ ದರ 10 ರೂ.ನಿಂದ 12 ರೂ.ಗೆ ಹೆಚ್ಚಳವಾಗಿದೆ ಎಂದು ವಿವರಣೆ ನೀಡಿದ್ದಾರೆ.
 
ನೈಸ್ ರಸ್ತೆಯ ಟೋಲ್ ದರ ಏರಿಕೆ ಅನಿವಾರ್ಯವಾಗಿದ್ದರಿಂದ ಶೇ.20 ರಷ್ಟು ಹೆಚ್ಚಳ ಮಾಡಲಾಗಿದೆ. ನಿಗದಿತಗಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ನೈಸ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮೇಲೆ ಹಲ್ಲೆ ಯತ್ನ..?