Webdunia - Bharat's app for daily news and videos

Install App

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ NIA ದಾಳಿ

Webdunia
ಬುಧವಾರ, 15 ಫೆಬ್ರವರಿ 2023 (19:37 IST)
ರಾಷ್ಟ್ರೀಯ ತನಿಖಾ ದಳ ದಕ್ಷಿಣ ಭಾರತ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಕಳೆದ ವರ್ಷದ ಕೊಯಮುತ್ತೂರು ಮತ್ತು ಮಂಗಳೂರು ಬ್ಲಾಸ್ಟ್​ ಪ್ರಕರಣಕ್ಕೆ ಸಂಬಧಿಸಿದಂತೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದ 40 ಪ್ರದೇಶಗಳ ಮೇಲೆ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೇರಳದ ಪಲ್ಲಕಡನಲ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ ಎಲೆಕ್ಟ್ರಾನಿಕ್​ ಡಿವೈಸ್​​ಗಳು​ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಕೊಟ್ಟಯ್​ ಈಶ್ವರನ್​ ದೇವಸ್ಥಾನದ ಎದುರುಗಡೆ ಸ್ಪೋಟಗೊಂಡ ಕಾರ್​ ಬ್ಲಾಸ್ಟ್​​ನಲ್ಲಿ ಜಮೀಶ್​ ಮುಬೀನ್ ಎಂಬಾತ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್​ಐಎ ಕಳೆದ ವರ್ಷ ಅಕ್ಟೋಬರ್​ 23 ರಂದು ತಮಿಳನಾಡಿನ 43 ಸ್ಥಳಗಳಲ್ಲಿ ದಾಳಿ ಮಾಡಿತ್ತು. ಇನ್ನು ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್​ ಬ್ಲಾಸ್ಟ್​ ಪ್ರಕರಣದಲ್ಲಿ ಆಟೋ ಚಾಲಕ ಮತ್ತು ಆರೋಪಿ ಮೊಹ್ಮದ್​ ಶಾರಿಕ್​ ಇಬ್ಬರು ಗಾಯಗೊಂಡಿದ್ದರು. ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ, ಶಾರಿಕ್ ಮತ್ತು ಆತನ ಸಹಚರರು ಕರ್ನಾಟಕದ ಅರಣ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಕ್ಯಾಂಪ್ ಸ್ಥಾಪಿಸಲು ಬಯಸಿದ್ದ ಎಂದು ಎನ್ಐಎಗೆ ತಿಳಿದುಬಂದಿದೆ. ಅಲ್ಲದೇ ಮಂಗಳೂರು ಸುತ್ತಮುತ್ತಲಿನ ಕಾಡಿನಲ್ಲಿ ಮೊಹ್ಮದ್​ ಶಾರಿಕ್​ ಮತ್ತು ಆತನ ಸಹಚರರು ಇಸ್ಲಾಮಿಕ್ ಸ್ಟೇಟ್‌ ಕ್ಯಾಂಪ್​ನ್ನು ಹೂಡಿದ್ದು, ಅಲ್ಲಿ ಮೊಹ್ಮದ್​ ಶಾರಿಕ್ ತರಬೇತಿ ಪಡೆದಿದ್ದ ಎಂದು ಎನ್​ಐಎ ಹೇಳಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments