ಬೆಂಗಳೂರು: 2025 ರ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು ಹೊಸ ವರ್ಷಾಚರಣೆಯ ಪಾರ್ಟಿ ಮಾಡುವವರಿಗಾಗಿ ಬೆಂಗಳೂರು ಪೊಲೀಸರು ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ಅದರ ವಿವರ ಇಲ್ಲಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಕೆಲವೊಂದು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ನಿಯಮಗಳ ವಿವರ ಇಲ್ಲಿದೆ ನೋಡಿ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದಿರಬೇಕು
ಹೊಸ ವರ್ಷಾಚರಣೆಗೆ ವಿರೋಧ ವ್ಯಕ್ತಪಡಿಸುವ ಸಂಘ-ಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹ, ಅವುಗಳ ಚಲನವಲನಗಳ ಬಗ್ಗೆ ಗುಪ್ತವಾಗಿ ಗಮನಕೊಡಲಾಗುವುದು
ಮಾಲ್, ಇತರೆ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮರಾ ಸುಸ್ಥಿತಿಯಲ್ಲಿವೆಯೇ ಎಂದು ಗಮನಿಸುವುದು
ಎಲ್ಲಾ ಅಧಿಕಾರಿಗಳು ಸರ್ವಿಸ್ ರಿವಾಲ್ವರ್ ಹೊಂದಿರಬೇಕು
ಸಿಬ್ಬಂದಿ ಹೆಲ್ಮೆಟ್ ಮತ್ತು ಲಾಠಿಗಳನ್ನು ಹೊಂದಿರಬೇಕು
ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ಧ ತಕ್ಷಣವೇ ಕ್ರಮ
ಮದ್ಯ ಸೇವಿಸಿ ಗಲಾಟೆ, ದೊಂಬಿ ಮಾಡಿದರೆ ಮಾಲಿಕರೇ ಹೊಣೆ
ಎಲ್ಲಾ ರಸ್ತೆಗಳಲ್ಲಿ ವಿದ್ಯುತ್ ದೀಪ ಬೆಳಗುತ್ತಿರಬೇಕು
ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
ಪ್ರಮುಖ ಫ್ಲೈ ಓವರ್ ಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ
ಯಾವುದೆ ಅಕ್ರಮಗಳು ನಡೆಯದಂತೆ ಪೊಲೀಸ್ ವಾಹನ ಗಸ್ತು ತಿರುಗುತ್ತಿರುತ್ತದೆ