Select Your Language

Notifications

webdunia
webdunia
webdunia
webdunia

ಅಬಕಾರಿ ಸಚಿವರ ರಾಸಲೀಲೆ ಪ್ರಕರಣ: ಯೂಟರ್ನ್ ಹೊಡೆದ ಸಂತ್ರಸ್ತೆ!

ಅಬಕಾರಿ ಸಚಿವರ ರಾಸಲೀಲೆ ಪ್ರಕರಣ: ಯೂಟರ್ನ್ ಹೊಡೆದ ಸಂತ್ರಸ್ತೆ!
ಬಾಗಲಕೋಟೆ , ಮಂಗಳವಾರ, 13 ಡಿಸೆಂಬರ್ 2016 (11:36 IST)
ಅಬಕಾರಿ ಸಚಿವ ಎಚ್.ವೈ.ಮೇಟಿ ವಿರುದ್ಧದ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಪೊಲೀಸ್ ಪೇದೆ ಸೇರಿದಂತೆ ನಾಲ್ವರು ಮೇಟಿ ಅವರ ವಿರುದ್ಧ ಆರೋಪ ಮಾಡುವಂತೆ ಜೀವ ಬೆದರಿಕೆ ಹಾಕಿ ವಿಡಿಯೋ ಮಾಡಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ದೂರಿದ್ದಾಳೆ. 
ಬಾಗಲಕೋಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂತ್ರಸ್ತೆ ಮಹಿಳೆ, ನವೆಂಬರ್ 20ರಂದು ಬಾಗಲಕೋಟೆಯ ಹೊರವಲಯಕ್ಕೆ ತಮ್ಮನ್ನು ಕರೆದುಕೊಂಡು ಹೋಗಿ ಸಚಿವರ ವಿರುದ್ಧ ಹೇಳಿಕೆ ನೀಡುವಂತೆ ಹೇಳಿ ಚಿತ್ರೀಕರಣ ಮಾಡಿದ್ದಾರೆ. ಈ ಎಲ್ಲ ಘಟನೆಗೂ ಪೇದೆ ಸುಭಾಷ ಮುಗುಳಕೋಡ ನೇರ ಹೊಣೆ ಎಂದು ಆರೋಪಿಸಿದ್ದಾಳೆ. 
 
ಸಚಿವರ ಪ್ರಕರಣದಲ್ಲಿ ನನ್ನನ್ನು ಎಳೆದುತರಲಾಗಿದೆ. ಯಾವ ಕ್ಷಣದಲ್ಲಾದರು ನನ್ನ ಜೀವ ಹೋಗಬಹುದು. ಹೀಗಾಗಿ ನಾನು ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಬಹಿರಂಗಪಡಿಸಲು ಹೆದರುತ್ತಿದ್ದೇನೆ ಎಂದು ಸಂತ್ರಸ್ತೆ ತನ್ನ ಅಳಲು ತೋಡಿಕೊಂಡಿದ್ದಾಳೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅವಮಾನ: ವಿದ್ಯಾರ್ಥಿಗಳಿಗೆ ಥಳಿತ