Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ಹೊಸ ಟೆನ್ಷನ್ ಶುರು : ಎನ್ಇಪಿ ರದ್ದತಿಗೆ ಒಕ್ಕೂಟ ವಿರೋಧ?

ಸರ್ಕಾರಕ್ಕೆ ಹೊಸ ಟೆನ್ಷನ್ ಶುರು : ಎನ್ಇಪಿ ರದ್ದತಿಗೆ ಒಕ್ಕೂಟ ವಿರೋಧ?
ಬೆಂಗಳೂರು , ಶನಿವಾರ, 26 ಆಗಸ್ಟ್ 2023 (10:34 IST)
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ ಯನ್ನು ರದ್ದು ಮಾಡಿ ಎಸ್ಇಪಿಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
 
ಈ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು. ಆದರೆ ರಾಜ್ಯ ಸರ್ಕಾರಕ್ಕೆ ಕೌಂಟರ್ ಕೊಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.

ಸರ್ಕಾರ ಮುಂದಿನ ವರ್ಷದಿಂದ ಎನ್ಇಪಿ ರದ್ದುಪಡಿಸಲು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ನಮಗೆ ಎನ್ಇಪಿ ಬೇಕು, ಎಸ್ಇಪಿ ಬೇಡ ಅಂತ ಪಟ್ಟು ಹಿಡಿದಿವೆ. ಅಂತಾರಾಷ್ಟ್ರೀಯ ಮಕ್ಕಳ ಜೊತೆಗೆ ಸ್ಪರ್ಧಿಸಲು ಎನ್ಇಪಿ ಅಗತ್ಯವಿದೆ.

ಎಸ್ಇಪಿ ಪಠ್ಯಕ್ರಮ ವ್ಯವಸ್ಥೆಯಿಂದ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಯಾಗುತ್ತೆ. ಎನ್ಇಪಿ ಲೋಪ ದೋಷ ಸರಿಪಡಿಸಿಕೊಂಡು ಕೊಂಚ ಬದಲಾವಣೆ ಮಾಡಿಕೊಂಡು, ಎನ್ಇಪಿ ಮುಂದುವರೆಸಬೇಕು ಅಂತ ಖಾಸಗಿ ಶಾಲೆಗಳು ಒತ್ತಾಯ ಹೇರುತ್ತಿವೆ. ಇದರಿಂದ ಸರ್ಕಾರಕ್ಕೆ ಹೊಸ ಟೆನ್ಷನ್ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಖಿ ಕಟ್ಟಲು ಅಣ್ಣ ಬೇಕೆಂದ ಮಗಳು: ಆ ತಂದೆ ತಾಯಿ ಮಾಡಿದ್ದಾದ್ರು ಏನು?