Select Your Language

Notifications

webdunia
webdunia
webdunia
webdunia

1 ನೇ ತರಗತಿ ವಿದ್ಯಾರ್ಥಿಗೆ ಹೊಸ ರೂಲ್ಸ್

students

geetha

bangalore , ಬುಧವಾರ, 6 ಮಾರ್ಚ್ 2024 (17:21 IST)
ಬೆಂಗಳೂರು-ಆರ್ ಟಿ ಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿ ಪಡಿಸಿ ಉಲ್ಲೇಖ-2 ರನ್ವಯ ತಿದ್ದುಪಡಿ ಆದೇಶ ಹೊರಡಿಸಿರುತ್ತದೆ. ಅದರಂತೆ ಕ್ರಮವಹಿಸಲು ಇಲಾಖೆಯ ಎಲ್ಲಾ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ.
 
ಕರ್ನಾಟಕ ಸರ್ಕಾರವು ಮೊದಲ ವಿದ್ಯಾರ್ಥಿಗೆ ಶಾಲಾ ಪ್ರವೇಶದ ವಯೋಮಿತಿಯನ್ನು ಜೂನ್ 1 ರಿಂದ 6 ವರ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.ಆರ್‌ಟಿಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರ ಅಡಿಯಲ್ಲಿ, ಪ್ರಥಮ ದರ್ಜೆಗೆ ಪ್ರವೇಶಕ್ಕೆ ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗಿದೆ.
 
ಹಿಂದಿನ ನಿಯಮಗಳ ಪ್ರಕಾರ ಒಂದನೇ ತರಗತಿಗೆ ಸೇರ್ಪಡೆಗೆ ಐದು ವರ್ಷ ಐದು ತಿಂಗಳಾದರೆ ಸಾಕಿತ್ತು. ಇದರ ಅನ್ವಯ ಹೆಚ್ಚಿನ ಮಕ್ಕಳನ್ನು ಮೂರುವರೆ ವರ್ಷಕ್ಕೆ ಎಲ್‌ಕೆಜಿಗೆ ಸೇರಿಸಲಾಗಿತ್ತು. ಅಂಥ ಮಕ್ಕಳು ಯುಕೆಜಿ ಮುಗಿಸುವಾಗ ಐದುವರೆ ವರ್ಷ ಮಾತ್ರ ಆಗಿರುತ್ತದೆ. ಆಗ ಅವರಿಗೆ ಒಂದನೇ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂದಾದರೆ ಮತ್ತೆ ಯುಕೆಜಿಯಲ್ಲೇ ಮುಂದುವರಿಸಬೇಕಾ ಎಂಬ ಗಂಭೀರ ಪ್ರಶ್ನೆ ಎದುರಾಗಿತ್ತು.
 
ಹಲವು ಶಿಕ್ಷಣ ಸಂಸ್ಥೆಗಳು ಕೂಡಾ ಇದರ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದವು. ಮಕ್ಕಳ ಅಮೂಲ್ಯ ಒಂದು ವರ್ಷ ಹಾಳಾಗುವುದರ ಜತೆಗೆ ಒಂದೇ ತರಗತಿಯಲ್ಲಿ ಎರಡು ವರ್ಷ ಕೂರಿಸುವುದು ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಇದೀಗ ವಯೋಮಿತಿ ನಿಗದಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮೇಶ್ವರಂ ಕೆಫೆಯ ಸ್ಪೋಟದ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ