Select Your Language

Notifications

webdunia
webdunia
webdunia
webdunia

ಮೆಟ್ರೋ ಹೊಸ ರೈಲುಗಳು ಸೇರ್ಪಡೆ

ಮೆಟ್ರೋ ಹೊಸ ರೈಲುಗಳು ಸೇರ್ಪಡೆ
ಬೆಂಗಳೂರು , ಮಂಗಳವಾರ, 7 ಡಿಸೆಂಬರ್ 2021 (15:01 IST)
ನಮ್ಮ ಮೆಟ್ರೋಗೆ 7 ಹೊಸ ರೈಲುಗಳು ಸೇರ್ಪಡೆಗೊಳ್ಳಲಿವೆ. ಪ್ರಸ್ತುತ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಒಟ್ಟು 50 ರೈಲುಗಳು ಸಂಚಾರ ನಡೆಸುತ್ತಿವೆ.
 
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಲ್) ಅತ್ಯಾಧುನಿಕ ಹೊಸ 7 ರೈಲುಗಳನ್ನು ನಿರ್ಮಾಣ ಮಾಡಿದೆ.ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ಓಡಿಸಲು ಈ ರೈಲುಗಳನ್ನು ಖರೀದಿ ಮಾಡಿದೆ. ಈ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 2022ರ ಅಂತ್ಯಕ್ಕೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
 
ಹೊಸ ರೈಲುಗಳು ಬಂದ ತಕ್ಷಣ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಕಾಯುವುದಿಲ್ಲ. ಉತ್ತರ-ದಕ್ಷಿಣ ಕಾರಿಡಾರ್ ಮತ್ತು ಪೂರ್ವ ಪಶ್ಚಿಮ ಕಾರಿಡಾರ್‌ಗಳಲ್ಲಿ ಅವುಗಳನ್ನು ಓಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.ಸಂಪಿಗೆ ರಸ್ತೆ-ಪೀಣ್ಯ ಇಂಡಸ್ಟ್ರಿ ನಿಲ್ದಾಣಗಳ ನಡುವೆ ರಾತ್ರಿ 10 ರಿಂದ ಬೆಳಗ್ಗೆ 4.30ರ ತನಕ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಒಟ್ಟು 5 ದಿನ ಪ್ರಾಯೋಗಿಕ ಸಂಚಾರ ನಿಗದಿಯಾಗಿತ್ತು. ಅವಧಿಗೂ ಮೊದಲೇ ಅದು ಪೂರ್ಣಗೊಂಡಿದ್ದು, ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮೈಕ್ರೋನ್ ಬಂದಿದ ವೈದ್ಯರಿಗೆ ಮತ್ತೆ ಪಾಸಿಟಿವ್