ಬೆಂಗಳೂರು : ಚುನಾವಣಾ ರಣೋತ್ಸಾಹದಲ್ಲಿದ್ದ ಕೈ ಪಾಳಯದಲ್ಲಿ ಈಗ ಆತಂಕದ ವಾತಾವರಣ ಶುರುವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಯಾಕೆಂದರೆ ಸೈಲೆಂಟಾಗಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ. ಇದರಿಂದ ಮೊದಲೇ ಕಂಗಾಲಾಗಿದ್ದ ಕಾಂಗ್ರೆಸ್ಗೆ ಈಗ ಮತ್ತೆ ಆತಂಕ ಶುರುವಾಗಿದೆ.
ಒಂದೆಡೆ ಬಿಜೆಪಿಯ ಹಿಂದುತ್ವ ಅಸ್ತ್ರದ ಮುಂದೆ ಮಂಡಿಯೂರಿದ ಕೈ ಪಾಳಯಕ್ಕೆ ಈಗ ಇನ್ನೊಂದು ತಲೆ ನೋವು ಶುರುವಾದಂತಿದೆ. ಇನ್ನೊಂದೆಡೆ ಮೈನಾರಟಿ ಲೀಡರ್ಸ್ ಹಾಗೂ ವೋಟ್ ಬ್ಯಾಂಕ್ಗೆ ಏಕಾಏಕಿ ಲಗ್ಗೆ ಇಡಲು ಹೆಚ್ಡಿಕೆ ಮುಂದಾಗಿದ್ದಾರೆ.
ಸೆಕ್ಯೂಲರ್, ಕಮ್ಯೂನಲ್, ಸಾಫ್ಟ್ ಹಿಂದುತ್ವ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಕೈ ನಾಯಕರು ಫುಲ್ ಕನ್ಫ್ಯೂಶನ್ ನಲ್ಲಿದ್ದಾರೆ.
ಬಿಜೆಪಿ ನಾಯಕರ ಹಿಂದುತ್ವದ ಅಸ್ತ್ರದ ವಿರುದ್ಧ ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡದ ಕಾಂಗ್ರೆಸ್ ನಾಯಕರುಗಳು, ಸಾಫ್ಟ್ ಹಿಂದುತ್ವಕ್ಕೆ ಮೊರೆ ಹೋಗಿದ್ದರು. ಇತ್ತ ಇಷ್ಟು ದಿನ ಸುಮ್ಮನಿದ್ದ ಕುಮಾರಸ್ವಾಮಿ ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಬಹಿರಂಗ ಟಕ್ಕರ್ ಕೊಟ್ಟು ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.