Select Your Language

Notifications

webdunia
webdunia
webdunia
webdunia

ಕಾಪಿ ಹೊಡೆದರೆ 3 ವರ್ಷ ಡಿಬಾರ್

ಕಾಪಿ ಹೊಡೆದರೆ 3 ವರ್ಷ ಡಿಬಾರ್
bengaluru , ಮಂಗಳವಾರ, 14 ಫೆಬ್ರವರಿ 2017 (08:26 IST)
ಪ್ರಶ್ನೆಪತ್ರಿಕೆ ಲೀಕ್ ಮಾಡುವವರಿಗೆ 5 ವರ್ಷ ಜೈಲು ಮತ್ತು 5 ಲಕ್ಷ ರೂಪಾಯಿ ದಂಡ  ಪರೀಕ್ಷಾ ಅಕ್ರಮ ಎಸಗಿದ ವಿದ್ಯಾರ್ಥಿಗೆ 3 ವರ್ಷ ಡಿಬಾರ್ ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನೊಳಗೊಂಡ ಕರ್ನಾಟಕ ಶಿಕ್ಷಣ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದೆ.


ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನ ತಡೆಯಲು ಸರ್ಕಾರ ಇಂತಹ ಕಠಿಣ ತಿದ್ದುಪಡಿಮಾಡಿದೆ. ಶಿಕ್ಷಣ ಸಚಿವ ತನ್ವೀರ್ ಸೇಠ್ ಈ ತಿದ್ದುಪಡಿ ವಿಧೇಯಕವನ್ನ ಮಂಡಿಸಿದರು. 

ಪರೀಕ್ಷಾ ಕೇಂದ್ರಗಳಲ್ಲೇ ಪ್ರಶ್ನೆಪತ್ರಿಕೆ ಮುದ್ರಣ, ಪ್ರಶ್ನೆಪತ್ರಿಕೆಗಳಿಗೆ ಬ್ಯಾಂಕ್ ಲಾಕರ್ ಬಳಕೆ, ಸಿಸಿಟಿವಿ ಅಳವಡಿಕೆ ಸೇರಿದಂತೆ ಹತ್ತು ಹಲವು ಭದ್ರತಾ ಕ್ರಮಗಳನ್ನ  ವಿಧೇಯಕ ಒಳಗೊಂಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧದಲ್ಲೇ ಐಎಎಸ್ ಅಧಿಕಾರಿಯ ಪತ್ನಿ ಬಂಗಾರದ ಸರ ಕಳವು