Daily Horoscope

Select Your Language

Notifications

webdunia
webdunia
webdunia
webdunia

‘ಹೊಂಬಾಳೆ ಫಿಲ್ಮ್ಸ್’ RCB ಜೊತೆ ಹೊಸ ಸಾಹಸ

New adventure
ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವ ‘ಹೊಂಬಾಳೆ ಫಿಲ್ಮ್ಸ್ ’ಈಗ ಹೊಸ ಹೆಜ್ಜೆ ಇಟ್ಟಿದೆ. ‘ಕೆಜಿಎಫ್:ಚಾಪ್ಟರ್ 2’, ‘ಸಲಾರ್’ ಮುಂತಾದ ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ನಿರ್ಮಾಪಕ ವಿಜಯ್​​​ ಕಿರಗಂದೂರ ಅವರು ಇಡುತ್ತಿರುವ ಎಲ್ಲ ಹೆಜ್ಜೆಗಳೂ ಕೂಡ ಹೊಸ ಮೈಲಿಗಲ್ಲನ್ನು ಸೃಷ್ಟಿಮಾಡುತ್ತಿವೆ. ‘ರಾಯಲ್​​ ಚಾಲೆಂಜರ್ಸ್ ಬೆಂಗಳೂರು’ ತಂಡದ ಜೊತೆ ‘ಹೊಂಬಾಳೆ ಫಿಲ್ಮ್ಸ್’ ಕೈಜೋಡಿಸಿದೆ. ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಮನರಂಜನೆಯ ಹೊಸ ಯುಗದ ಆರಂಭ ಆಗುತ್ತಿದೆ’ ಎಂದು ಪೋಸ್ಟ್​​ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೌತುಕ ಮೂಡಿಸಿತ್ತು. ಐಪಿಎಲ್ ಕ್ರಿಕೆಟ್ ಟೀಂ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಕೈಜೋಡಿಸಿರುವುದು ಇದೇ ಮೊದಲು . ಆ ಮೂಲಕ ಹೊಸ ಬಗೆಯ ಮನರಂಜನೆಯನ್ನು ನೀಡಲು ವಿಜಯ್​​​ ಕಿರಗಂದೂರ ಅವರು ಪ್ಲ್ಯಾನ್​ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಜುನಾಥನ ದರ್ಶನ ಪಡೆದ ಯಶ್​​​