ಕೆಲವೊಂದು ಭಾರೀ ನಾವು ಗೊತ್ತಿಲ್ಲದೆ ಮಾಡುವ ತಪ್ಪುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಬೀರುವ ಸಾಧ್ಯತೆಯಿದೆ. ಹಲವು ಭಾರೀ ನಮ್ಮ ಮನೆಯ ಗಡಿಯಾರ ನಿಂತು ಹೋಗಿದ್ದರು, ಗೊತ್ತಿಲ್ಲದೆ ಅದನ್ನು ತಿಂಗಳು ಗಟ್ಟಲೇ ಹಾಗೆಯೇ ಬಿಡುವುದು ಉಂಟು. ಮನೆಯಲ್ಲಿ ನಿಂತಿರುವ ಗಡಿಯಾರವನ್ನು ಇಟ್ಟುಕೊಳ್ಳಬಾರದು ಎಂಬುದು ಕೇವಲ ಮೂಢನಂಬಿಕೆಯಲ್ಲ, ಅದರ ಹಿಂದೆ ಕೆಲವು ಆಸಕ್ತಿದಾಯಕ ಕಾರಣಗಳಿವೆ.
ನಮ್ಮ ಹಿರಿಯರು ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾಕೆ ನಿಂತಿರುವ ಗಡಿಯಾರವನ್ನು ಇಟ್ಟುಕೊಳ್ಳಬಾರದು ಎಂಬುದಕ್ಕೆ ಇಲ್ಲಿದೆ ಕೆಲ ಅಂಶಗಳು.
ನಕಾರಾತ್ಮಕ ಶಕ್ತಿ: ನಿಂತಿರುವ ಗಡಿಯಾರವು "ಸ್ಥಗಿತಗೊಂಡ ಸಮಯ"ವನ್ನು ಸೂಚಿಸುತ್ತದೆ. ಇದು ಮನೆಯಲ್ಲಿ ಪ್ರಗತಿ ಕುಂಠಿತವಾಗಲು ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗಬಹುದು ಎಂದು ನಂಬಲಾಗುತ್ತದೆ.
ಕೆಲಸದಲ್ಲಿ ವಿಳಂಬ: ಗಡಿಯಾರವು ನಿರಂತರ ಚಲನೆಯ ಸಂಕೇತ. ಅದು ನಿಂತಾಗ, ನಮ್ಮ ಜೀವನದ ಶುಭ ಕಾರ್ಯಗಳು ಅಥವಾ ಪ್ರಮುಖ ಕೆಲಸಗಳು ತಡವಾಗಬಹುದು ಎಂಬ ಭಾವನೆ ಇದೆ.
ಮಾನಸಿಕ ಪರಿಣಾಮ: ಪದೇ ಪದೇ ನಿಂತ ಗಡಿಯಾರವನ್ನು ನೋಡುವುದು ನಮ್ಮಲ್ಲಿ ಸೋಮಾರಿತನ ಅಥವಾ ಉತ್ಸಾಹದ ಕೊರತೆಯನ್ನು ಉಂಟುಮಾಡಬಹುದು.