Select Your Language

Notifications

webdunia
webdunia
webdunia
webdunia

ಆರೆಸ್ಸೆಸ್ ಶಿಕ್ಷಕರ ಪಟ್ಟಿ ಕೋರಿಲ್ಲ: ಪರಮೇಶ್ವರ್ ಸ್ಪಷ್ಟನೆ

ಆರೆಸ್ಸೆಸ್ ಶಿಕ್ಷಕರ ಪಟ್ಟಿ ಕೋರಿಲ್ಲ: ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು , ಶನಿವಾರ, 15 ಜುಲೈ 2017 (15:36 IST)
ಶಾಲಾ ಕಾಲೇಜುಗಳಲ್ಲಿರುವ ಆರೆಸ್ಸೆಸ್ ಪರ ಶಿಕ್ಷಕರ ಪಟ್ಟಿಯನ್ನು ಸಿದ್ದಪಡಿಸುವಂತೆ ಕೋರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
 
ಕಾಲೇಜುಗಳಲ್ಲಿರುವ ಆರೆಸ್ಸೆಸ್ ಪರವಾಗಿರುವ ಶಿಕ್ಷಕರನ್ನು ಗುರುತಿಸುವಂತೆ ಕಾಂಗ್ರೆಸ್ ಪಕ್ಷ ಯಾವುದೇ ಆದೇಶ ಹೊರಡಿಲಿಲ್ಲ ಎಂದು ತಿಳಿಸಿದ್ದಾರೆ. ಇಂತಹ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.
 
ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ವೇಣುಗೋಪಾಲ್ ಕೂಡಾ ಇಂತಹ ಯಾವುದೇ ಪಟ್ಟಿಯನ್ನು ಕೇಳಿಲ್ಲ. ವಿಪಕ್ಷವಾದ ಬಿಜೆಪಿ ಇಂತಹ ಉಹಾಪೋಹಗಳನ್ನು ಹರಡಿಸುತ್ತಿರಬಹುದು ಎಂದು ಕಿಡಿಕಾರಿದ್ಗಾರೆ.
 
ಬಿಜೆಪಿ ನಾಯಕರಿಗೆ ಸರಕಾರದ ವಿರುದ್ಧ ಮಾಡಲು ಯಾವುದೇ ಆರೋಪಗಳು ದೊರೆಯುತ್ತಿಲ್ಲ. ಆದ್ದರಿಂದ, ಇಂತಹ ಹೇಳಿಕೆಗಳನ್ನು ನೀಡುತ್ತಾ ತಿರುಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನುವ ಹಕ್ಕಿದೆ: ಮೋದಿ ಸಂಪುಟದ ಸಚಿವ