ಬಾನು ಮುಷ್ತಾಕ್ ಗೂ ನಿಸಾರ್ ಅಹ್ಮದ್ ಗೂ ಹೇಗ್ರೀ ಹೋಲಿಸ್ತೀರಿ: ಸಿದ್ದರಾಮಯ್ಯಗೆ ನೆಟ್ಟಿಗರ ತರಾಟೆ

Krishnaveni K
ಸೋಮವಾರ, 1 ಸೆಪ್ಟಂಬರ್ 2025 (09:44 IST)
ಬೆಂಗಳೂರು: ಮೈಸೂರು ದಸರಾ ಮಹೋತ್ಸವವನ್ನು ಮುಸ್ಲಿಂ ಸಮುದಾಯದ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸುತ್ತಿರುವದನ್ನು ವಿರೋಧಿಸುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದರು. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಬಾನು ಮುಷ್ತಾಕ್ ಗೂ ನಿಸಾರ್ ಅಹ್ಮದ್ ಗೂ ಹೋಲಿಕೆ ಮಾಡಬೇಡಿ ಎಂದಿದ್ದಾರೆ.

ಮೈಸೂರು ದಸರಾ ಉದ್ಘಾಟಕರ ಆಯ್ಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯಲ್ಲಿ ನನಗೆ ಅಧಿಕಾರ ನೀಡಲಾಗಿತ್ತು. ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕೆಂದು ತೀರ್ಮಾನಿಸಲಾಯಿತು. ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ. ದಸರಾ ನಾಡ ಹಬ್ಬ, ಸಾಂಸ್ಕೃತಿಕ ಆಚರಣೆಯಾಗಿದೆ. ನಾಡ ಹಬ್ಬವನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕೆಂದು ಇಲ್ಲ. ನಾಡ ಹಬ್ಬ ಎಲ್ಲರಿಗೂ ಹಬ್ಬವೇ. ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನರಿಗೂ ಇದು ಹಬ್ಬ. ಮಹಾರಾಜರ ಆಡಳಿತ ಇಲ್ಲದಿರುವಾಗ  ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸುತ್ತಿದ್ದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ದಸರಾ ಆಚರಿಸಿದ್ದಾರೆ. ಇದೊಂದು ಧರ್ಮಾತೀತ, ಜಾತ್ಯಾತೀತ ಹಬ್ಬ. ಕರ್ನಾಟಕದಲ್ಲಿ ಬೂಕರ್ ಪ್ರಶಸ್ತಿ ಪಡೆದ ಸಾಹಿತಿಗಳು ಬಹಳ ಕಡಿಮೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ಬಗ್ಗೆ ಧರ್ಮಾಂಧರು ಮಾತ್ರ ಮಾತನಾಡುತ್ತಾರೆ. ಅವರಿಗೆ ಇತಿಹಾಸ ತಿಳಿದಿಲ್ಲ, ಇತಿಹಾಸವನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಇದಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು ಬಾನು ಮುಷ್ತಾಕ್ ಗೂ ನಿಸಾರ್ ಅಹ್ಮದ್ ಗೂ ಹೋಲಿಕೆ ಮಾಡಬೇಡಿ. ನಿಸಾರ್ ಅಹ್ಮದ್, ಅಬ್ದುಲ್ ಕಲಾಂ ಅಂತಹವರು ಮುಸ್ಲಿಮರಾಗಿದ್ದರೂ ಹಿಂದೂ ಧರ್ಮ, ಆಚರಣೆಯನ್ನು ಒಪ್ಪಿಕೊಂಡವರು. ಬಾನು ಅರಿಶಿನ ಕುಂಕುಮಕ್ಕೇ ಅವಮಾನಿಸಿದವರು. ಅವರಿಗೂ ಇವರಿಗೂ ಹೇಗ್ರೀ ಹೋಲಿಕೆ ಮಾಡ್ತೀರಿ ಎಂದಿದ್ದಾರೆ. ಇನ್ನು ಕೆಲವರು ಬೂಕರ್ ಪ್ರಶಸ್ತಿ ಬಂದಿದ್ದು ಬಾನು ಮುಷ್ತಾಕ್ ಗೆ ಮಾತ್ರವಲ್ಲ, ದೀಪಾ ಬಸ್ತಿ ಅನುವಾದಿಸಿದ್ದಕ್ಕೆ ಬಂದಿದ್ದು. ಪ್ರಶಸ್ತಿ ಇಬ್ಬರಿಗೂ ಕೊಟ್ಟಿರುವಾಗ ಉದ್ಘಾಟನೆಗೂ ಇಬ್ಬರನ್ನೂ ಕರೆಸಿಬೇಕಿತ್ತಲ್ವೇ? ಯಾಕೆ ಮುಸ್ಲಿಂ ಸಮುದಾಯದ ಬಾನು ಅವರನ್ನು ಮಾತ್ರ ಆಹ್ವಾನಿಸಿದ್ದೀರಿ ಎಂದೂ ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments