ಪ್ರಪೋಸ್ ಮಾಡಿದ್ದು ನೇಹಾ ಎಂದ ಫಯಾಜ್ ತಾಯಿ, ಫಯಾಜ್ ಬೆದರಿಕೆ ಹಾಕಿದ್ದ ಎಂದ ನೇಹಾ ತಂದೆ

Krishnaveni K
ಶನಿವಾರ, 20 ಏಪ್ರಿಲ್ 2024 (12:59 IST)
ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನೇಹಾ ತಂದೆ ಮತ್ತು ಆರೋಪಿ ಫಯಾಜ್ ತಾಯಿ ಹೇಳಿಕೆ ನೀಡಿದ್ದಾರೆ.

ನನ್ನ ಮಗಳನ್ನು ಫಯಾಜ್ ಇಷ್ಟಪಡುತ್ತಿದ್ದ. ನಮಗೆ ಫೋನ್ ಮಾಡಿ ಮದುವೆ ಮಾಡಿಕೊಡುವಂತೆ ಹೇಳಿದ್ದ. ಆದರೆ ನನ್ನ ಮಗಳಿಗೆ ನಿನ್ನನ್ನು ಇಷ್ಟವಿಲ್ಲ. ಅವಳಿಗೆ ಉನ್ನತ ವ್ಯಾಸಂಗ ಮಾಡುವುದಿದೆ ಎಂದಿದ್ದೆವು. ಆದರೆ ಇದಕ್ಕೆ ಸಿಟ್ಟಿಗೆದ್ದ ಆತ ಒಪ್ಪದೇ ಹೋದರೆ ಕೊಲೆ ಮಾಡುವುದಾಗಿ ನೇಹಾಗೆ ಬೆದರಿಕೆ ಹಾಕಿದ್ದ ಎಂದು ನೇಹಾ ತಂದೆ ನಿರಂಜನ್ ಹೀರೇಮಠ್ ಹೇಳಿದ್ದಾರೆ.

ಇನ್ನೊಂದೆಡೆ ನೇಹಾ ಹತ್ಯೆ ಮಾಡಿದ್ದ ಹಂತಕ ಫಯಾಜ್ ತಾಯಿ ಕೂಡಾ ಪ್ರತಿಕ್ರಿಯಿಸಿದ್ದು, ನನ್ನ ಮಗನಿಗೆ ನೇಹಾಳೇ ಪ್ರಪೋಸ್ ಮಾಡಿದ್ದಳು ಎಂಬ ಅಚ್ಚರಿ ವಿಚಾರ ಹೇಳಿದ್ದಾಳೆ. ನೇಹಾ ಪ್ರಪೋಸ್ ಮಾಡಿದ್ದನ್ನು ನನ್ನ ಮಗ ನನಗೆ ಹೇಳಿದ್ದೆ. ನಾನು ಲವ್ ಎಲ್ಲಾ ಬೇಡ ಎಂದಿದ್ದೆ. ನನ್ನ ಮಗ ಮಾಡಿದ ತಪ್ಪಿಗೆ ನಾನು ಇಡೀ ರಾಜ್ಯದ ಜನರ ಮುಂದೆ ಕ್ಷಮೆ ಯಾಚಿಸುತ್ತೇನೆ. ನನ್ನ ಮಗನಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ.

ನೇಹಾ ತಂದೆ-ತಾಯಿಗೂ ಕ್ಷಮೆ ಕೇಳುತ್ತೇನೆ. ನನ್ನ ಮಗ ಮಾಡಿದ್ದು ತಪ್ಪೇ. ಈ ನೆಲದ ಕಾನೂನು ಏನು ಹೇಳುತ್ತೋ ಆ ಪ್ರಕಾರ ಅವನಿಗೆ ಶಿಕ್ಷೆಯಾಗಲಿ. ಅವರು ಮೊದಲು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅವರು ಪ್ರೀತಿಸುತ್ತಿದ್ದರು. ಮೊದಲು ನೇಹಾನೇ ಅವನ ನಂಬರ್ ತೆಗೆದುಕೊಂಡು ಕಾಂಟ್ಯಾಕ್ಟ್ ಮಾಡುತ್ತಿದ್ದಳು ಎಂದಿದ್ದಾರೆ. ನನ್ನ ಮಗನಿಗೆ ಐಎಎಸ್ ಓದಿಸಬೇಕು ಎಂದು ಆಸೆಯಿತ್ತು. ಅವನು ಅಷ್ಟು ಜಾಣ ಇದ್ದ ಎಂದು ಫಯಾಜ್ ತಾಯಿ ಕಣ್ಣೀರು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸೋದು ಸುಲಭ ಅಲ್ಲ, ಈ ಗುಟ್ಟು ಹೈಕಮಾಂಡ್ ಗೂ ಗೊತ್ತು

ಚಿಕ್ಕಮಗಳೂರಿನಲ್ಲಿ ಶಿಕ್ಷಕಿಯ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ: ಕಿರುಚಿಕೊಂಡಿದ್ದಕ್ಕೆ ದುರುಳರು ಮಾಡಿದ್ದೇನು

ಆರ್ ಎಸ್ಎಸ್ ಕ್ವಿಜ್ ಹಾಗಿರ್ಲಿ, ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿ: ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರ ಕ್ಲಾಸ್

Karnataka Weather: ಇಂದೂ ಇರಲಿದೆಯಾ ಸೈಕ್ಲೋನ್ ಮೊಂಥಾ ಇಫೆಕ್ಟ್, ಇಲ್ಲಿದೆ ಹವಾಮಾನ ವರದಿ

ಪ್ರೈವೆಸಿಗೆ ಅಡ್ಡಿಯಾಗುತ್ತಾಳೆಂದು ಮಗಳನ್ನು ಮುಗಿಸಿದ ಮಲತಂದೆ ಕೊನೆಗೂ ಅರೆಸ್ಟ್‌

ಮುಂದಿನ ಸುದ್ದಿ
Show comments