Daily Horoscope

Select Your Language

Notifications

webdunia
webdunia
webdunia
webdunia

NEET Paper Leak Row: ರಾಜೀನಾಮೆಗೆ ಕಾರಣ ಬಿಚ್ಚಿಟ್ಟ ಧರ್ಮೇಂದ್ರ ಪ್ರಧಾನ್

NEET UG Paper Leak Row
ನವದೆಹಲಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಜೆನ್ ಝಡ್‌ ಇಂದಿನ ಯುವ ಪೀಳಿಗೆಯನ್ನು ದಾರಿತಪ್ಪಿಸುವ ಪ್ರಯತ್ನಗಳು ನಡೆಯಿತು. ಇದೇ ಕಾರಣಕ್ಕೆ ತಾವು ಆ ಹುದ್ದೆಯಿಂದ ಕೆಳಗಿಳಿಯಬೇಕಾಯಿತು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು.

ಒಡಿಶಾದ ಭುವನೇಶ್‌ದಲ್ಲಿರುವ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ್, ತಮ್ಮ ರಾಜೀನಾಮೆಯ ಕುರಿತಾದ ಮೌನವನ್ನು ಮುರಿದರು.

ನಾನು 'ಜೆನ್ ಝಡ್'ನ ಪ್ರಭಾವಕ್ಕೆ ಒಳಗಾದೆ. ಈ ಸಂಪೂರ್ಣ ಘಟನೆ ನಡೆದ ರೀತಿಯನ್ನು ಗಮನಿಸಿದಾಗ, ಹೊಸ ಪೀಳಿಗೆಯ ಮಕ್ಕಳನ್ನು ದಾರಿತಪ್ಪಿಸಲು ಕೆಲವರು ಪ್ರಯತ್ನಿಸಿದರು ಎಂದು ನನಗೆ ಅನ್ನಿಸಿತು.

"ನಾನು ಪ್ರಧಾನಿಗಳನ್ನು ಭೇಟಿಯಾಗಿ, 'ಜೆನ್ ಝಡ್'ನ ಆಶಯವನ್ನು ಒಪ್ಪಿಕೊಳ್ಳುವಂತೆ ಕೋರಿದೆ. ಮಕ್ಕಳ ಮುಂದೆ ಈ ವಿಷಯವನ್ನು ಒಪ್ಪಿಕೊಳ್ಳಲು ನನಗೆ ಅವಕಾಶ ನೀಡುವಂತೆ ಅವರಿಗೆ ಹೇಳಿದೆ. ಈ ವಿಷಯದಲ್ಲಿ ನಾನು ಎಂದಿಗೂ ನನ್ನ ವೈಯಕ್ತಿಕ ಗೌರವವನ್ನು ಪಣಕ್ಕಿಡಲಿಲ್ಲ," ಎಂದು ಅವರು ನುಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಖಾತೆ ಹಂಚಿಕೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ