ಕರಾವಳಿಯ ಖಾದ್ಯಕ್ಕೆ ಮನಸೋತ ನರೇಂದ್ರಮೋದಿ

ಮಂಗಳವಾರ, 19 ಡಿಸೆಂಬರ್ 2017 (10:16 IST)
ಓಖಿ ಚಂಡಮಾರುತದ ಪರಿಣಾಮದಿಂದ ಹಾನಿಗೊಳಗಾದ ಲಕ್ಷದ್ವೀಪ ಪ್ರದೇಶಗಳಿಗೆ ಭೇಟಿ ನೀಡಲು ರಾಜ್ಯಕ್ಕೆ ಬಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರಾವಳಿಯ ಖಾದ್ಯಕ್ಕೆ ಮನಸೋತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಿನ ಉಪಹಾರಕ್ಕೆ ನೀರುದೋಸೆ, ಕಡುಬು, ಅವಲಕ್ಕಿ ಮತ್ತು ಉಪ್ಪಿಟ್ಟನ್ನು ಸವಿದಿದ್ದಾರೆ.

ತಾವು ತಿಂದ ತಿಂಡಿಯಲ್ಲಿ ಕಡುಬಿನ ರುಚಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು, ನಂತರ ಓಷಿಯನ್ ಪರ್ಲ್ ಹೋಟೆಲ್ ಸಿಬ್ಬಂದಿ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ. ಅಲ್ಲದೇ ತಿಂಡಿ ಬಡಿಸಿದವರಿಗೆ ಪ್ರಶಂಸೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವೀರಶೈವ-ಲಿಂಗಾಯತ ಹೋರಾಟ ಶಿವಕುಮಾರ ಸ್ವಾಮೀಜಿ ತೀರ್ಮಾನಕ್ಕೆ ಬದ್ದ- ಬಿಎಸ್ ವೈ