Select Your Language

Notifications

webdunia
webdunia
webdunia
webdunia

ನರೇಗಾ ಹೆಸರು ಮರುನಾಮಕರಣ, ಬಿಜೆಪಿಯ ಅಂತ್ಯ ಎಂದ ಡಿಕೆ ಶಿವಕುಮಾರ್

DCM DK Shivkumar
ಬೆಂಗಳೂರು: ಹುಟ್ಟಿದ ಸೂರ್ಯ ಮುಳುಗಲೇ ಬೇಕು. ಇನ್ನೂ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ಕೊನೆಯ ದಿನಗಳು ಶುರುವಾಗಿದೆಯೆಂದು ಡಿಸಿಎಮ ಡಿಕೆ ಶಿವಕುಮಾರ್ ಹೇಳಿದರು. 

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ (ಡಿ.22) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ, ಆರ್ಟಿಕಲ್ 21ರ ಮೂಲಕ ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಮುಟ್ಟುವ ಕೆಲಸ ಮಾಡುತ್ತದೆ ಎಂದು ನಂಬಿರಲಿಲ್ಲ. ಆದರೆ ಇದೀಗ ನರೇಗಾ ಹೆಸರನ್ನು ಮರು ನಾಮಕರಣ ಮಾಡಲು ಹೊರಟಿರುವುದನ್ನು ನೋಡಿದೆರೆ ಬಿಜೆಪಿಯ ಅಂತ್ಯ ಶುರುವಾಗಿದೆ ಎನಿಸುತ್ತಿದೆ. 

ಬಡವರಿಗೆ ಕೊಟ್ಟ ಕಾರ್ಯಕ್ರಮದ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ದೇಶದ ಬಡಜನತೆಗೆ ಎಸಗುತ್ತಿರುವ ದ್ರೋಹವಿದು. ಇದಕ್ಕಿಂತ ದೊಡ್ಡ ಅವಮಾನವಿಲ್ಲ. ಇನ್ನೂ ಈ ಸಂಬಂಧ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಹೋರಾಟ ನಡೆಸಲಾಗುವುದು ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಪಸಂಖ್ಯಾತರು ಭಯಭೀತರಾಗದಂತೆ ಮಮತಾ ಬ್ಯಾನರ್ಜಿ ಮನವಿ