Publish Date: Tue, 14 Jan 2020 (18:46 IST)
Updated Date: Tue, 14 Jan 2020 (18:48 IST)
ನಾರಾಯಣಗೌಡರ ಧರ್ಮಪತ್ನಿ ಮಾಡಬಾರದ ಕೆಲಸ ಮಾಡಿ ಜೀವ ಕಳೆದುಕೊಂಡಿದ್ದಾರೆ.
ಮಂಡ್ಯದ ಗೋವಿಂದೇಗೌಡನಕೊಪ್ಪಲು ಗ್ರಾಮದ ಕೃಷಿ ಕಾರ್ಮಿಕ ರೈತ ಮಹಿಳೆ ಸಾಲದ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗೋವಿಂದೇಗೌಡನಕೊಪ್ಪಲು ಗ್ರಾಮದ ನಾರಾಯಣಗೌಡರ ಪತ್ನಿ ರತ್ನಮ್ಮ(45) ಆತ್ಮಹತ್ಯೆ ಶರಣಾದ ರೈತ ಮಹಿಳೆ. ಮೃತ ರತ್ನಮ್ಮ ಅವರಿಗೆ ಸುಮಾರು 45ವರ್ಷ ವಯಸ್ಸಾಗಿತ್ತು. ಮೃತ ಮಹಿಳೆಯ ಕುಟುಂಬಕ್ಕೆ ಹೊಸಹೊಳಲು ಗ್ರಾಮ ಎಲ್ಲೆಗೆ ಸೇರಿದ ಸರ್ವೆ ನಂ.109ರಲ್ಲಿ ಎರಡು ಎಕರೆ ಭೂಮಿ ಇದ್ದು ಅದು ಬೀಳು ಬಿದ್ದಿತ್ತು.
ಈ ಭೂಮಿಯನ್ನು ರಿಸ್ಟೋರ್ ಮಾಡಿಸಿಕೊಳ್ಳಲು ಹಲವು ಮಹಿಳಾ ಸ್ವಸಹಾಯ ಸಂಘಗಳಲ್ಲಿ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಸೇರಿ ಒಟ್ಟು ಸುಮಾರು ಐದಾರು ಲಕ್ಷ ರೂ.ಗಳ ಸಾಲವನ್ನು ಪಡೆದುಕೊಂಡಿದ್ದರು. ಆದರೂ ಭೂಮಿಯ ದಾಖಲೆಗಳು ಅವರ ಕುಟುಂಬದ ಹೆಸರಿಗೆ ಆಗಿರಲಿಲ್ಲ.
ಈ ನಡುವೆ ಸಾಲ ನೀಡಿದ ವಿವಿಧ ಸಂಘಗಳ ಕಂತಿನ ಹಣವನ್ನು ಪಾವತಿಸಲು ತೊಂದರೆಯಾಗಿತ್ತು.
ಎರಡೂ ಕಾರಣದಿಂದ ಮನನೊಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.