Webdunia - Bharat's app for daily news and videos

Install App

ಪೀಣ್ಯ-ನಾಗಸಂದ್ರ ನಡುವೆ 3 ದಿನ ಮೆಟ್ರೋ ಇಲ್ಲ: ಯಾಕೆ ಇಲ್ಲಿ ನೋಡಿ

Krishnaveni K
ಗುರುವಾರ, 25 ಜನವರಿ 2024 (11:08 IST)
Namma Metro
ಬೆಂಗಳೂರು: ಪೀಣ್ಯ ಮತ್ತು ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಇರಲ್ಲ ಎಂದು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಮಾಹಿತಿ ನೀಡಿದೆ.

ಮೆಟ್ರೋದಲ್ಲಿ ಓಡಾಡುವ ಪೀಣ್ಯ ಮತ್ತು ಸುತ್ತಮುತ್ತಲಿನ ಜನರಿಗೆ ಇದು ನಿರಾಸೆಯ ಸುದ್ದಿಯಾಗಿದೆ. ಈ ವಾರ ವೀಕೆಂಡ್ ನಲ್ಲಿ ಹೆಚ್ಚುವರಿ ರಜೆಯಿದ್ದು, ಈ ವಾರದಲ್ಲಿ ಮೆಟ್ರೋದಲ್ಲಿ ಓಡಾಡುವವರಿಗೆ ಕೊಂಚ ಮಟ್ಟಿಗೆ ತೊಂದರೆಯಾಗಲಿದೆ. ಆದರೆ ಈ ಮೂರು ದಿನದ ವ್ಯತ್ಯಯಕ್ಕೆ ಕಾರಣವೂ ಇದೆ.

ನಾಳೆ ಅಂದರೆ ಜನವರಿ 26 ರಿಂದ ಜನವರಿ 28 ರವರೆಗೆ ತಾತ್ಕಾಲಿಕವಾಗಿ ಮೂರು ದಿನ ಈ ಹಸಿರು ಮಾರ್ಗದಲ್ಲಿ ಮೆಟ್ರೋ ಇರಲ್ಲ. ಜನವರಿ 29 ರಂದು ಬೆಳಿಗ್ಗೆ 5 ಗಂಟೆಯಿಂದ ಎಂದಿನಂತೆ ಮೆಟ್ರೋ ಓಡಾಟ ನಡೆಸಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ನೀಡಿದೆ.

ಮೆಟ್ರೋದ ಎರಡನೇ ಹಂತದ ಕಾಮಗಾರಿ ಇದೀಗ ಜಾರಿಯಲ್ಲಿದೆ. ಅದರಂತೆ ನಾಗಚಂದ್ರದಿಂದ ಮಾದವಾರದವರೆಗೆ ವಿಸ್ತರಿತ ಕಾಮಗಾರಿ ನಡೆಯುತ್ತಿದೆ. ಈ ಕಾರಣಕ್ಕೆ ಮೂರು ದಿನ ಸಂಚಾರ ಸ್ಥಗಿತವಾಗುತ್ತಿದೆ. ಮೆಟ್ರೋ ಇಲ್ಲದ ಕಾರಣ ಈ ಮೂರು ದಿನ ಪೀಣ್ಯ ವಲಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ‍್ಯತೆಯಿದೆ.

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರು ಉದ್ಯೋಗಸ್ಥರೇ ಹೆಚ್ಚಾಗಿರುತ್ತಾರೆ. ಅದರಲ್ಲೂ ಸಂಜೆ ಮತ್ತು ಬೆಳಿಗ್ಗೆ ಟ್ರಾಫಿಕ್ ದಟ್ಟಣೆಯಿಲ್ಲದೇ ಮನೆ ತಲುಪಲು ಹೆಚ್ಚಿನವರು ಮೆಟ್ರೋವನ್ನು ಆಶ‍್ರಯಿಸುತ್ತಾರೆ. ಅವರಿಗೆಲ್ಲಾ ಈ ಅಡಚಣೆಯಿಂದ ಕೊಂಚ ಮಟ್ಟಿಗೆ ತೊಂದರೆಯಾಗಬಹುದು. ಆದರೆ ಇಡೀ ಬೆಂಗಳೂರಿಗೆ ಮೆಟ್ರೋ ಸೇವೆ ವಿಸ್ತರಿಸುವ ಬಿಎಂಆರ್ ಸಿಎಲ್ ಯೋಜನೆಯಿಂದಾಗಿ ಕೆಲವೊಮ್ಮೆ ಇಂತಹ ಅಡಚಣೆಯನ್ನು ಎದುರಿಸುವುದು ಅನಿವಾರ್ಯವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ನೊಂದಿಗೆ ಭಾರತದ ಮಾಹಿತಿ ಹಂಚಿಕೆ: ಗುಜರಾತ್‌ನ ವ್ಯಕ್ತಿ ಅರೆಸ್ಟ್‌

Tejasvi Surya: ಪಹಲ್ಗಾಮ್ ನಲ್ಲಿ ಬಲಿಯಾದ ಮಂಜುನಾಥ್ ಪುತ್ರನಿಗೆ ನೀಡಿದ್ದ ಭರವಸೆ ಈಡೇರಿಸಿದ ತೇಜಸ್ವಿ ಸೂರ್ಯ

Kerala Monsoon: ರೈತರಿಗೆ ಮುಂಗಾರಿನ ಸಿಹಿ ಸುದ್ದಿ, ಕೇರಳಕ್ಕೆ ಎಂಟ್ರಿ ಕೊಟ್ಟ ವರುಣ

KCET results live: ಜನಿವಾರ ತೆಗೆಸಿದ ವಿದ್ಯಾರ್ಥಿಯ ಫಲಿತಾಂಶ ಏನಾಗಿದೆ ಗೊತ್ತಾ

KCET Results live: ಕೆಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments