Select Your Language

Notifications

webdunia
webdunia
webdunia
webdunia

ನಮ್ಮ ಕ್ಯಾಂಟೀನ್`ಗೆ `ಇಂದಿರಾ ಕ್ಯಾಟೀನ್’ ಎಂದು ನಾಮಕರಣ: ಟ್ವಿಟ್ಟರ್`ನಲ್ಲಿ ಸಿಎಂ ಘೋಷಣೆ

ನಮ್ಮ ಕ್ಯಾಂಟೀನ್`ಗೆ `ಇಂದಿರಾ ಕ್ಯಾಟೀನ್’ ಎಂದು ನಾಮಕರಣ: ಟ್ವಿಟ್ಟರ್`ನಲ್ಲಿ ಸಿಎಂ ಘೋಷಣೆ
ಬೆಂಗಳೂರು , ಮಂಗಳವಾರ, 28 ಮಾರ್ಚ್ 2017 (12:45 IST)
ತಮಿಳುನಾಡಿನ ಅಮ್ಮ ಕ್ಯಾಂಟೀನ್ ರೀತಿ ಬೆಂಗಳೂರು ನಗರಕ್ಕೆ ನಮ್ಮ ಕ್ಯಾಂಟೀನ್ ಯೋಜನೆಯನ್ನ ಸಿಎಂ ಸಿದ್ದರಾಮಯ್ಯ ಬಜೆಟ್`ನಲ್ಲಿ ಘೋಷಿಸಿದ್ದರು. ಇದೀಗ, ನಮ್ಮ ಕ್ಯಾಂಟೀನ್ ಹೆಸರನ್ನ ಬದಲಾಯಿಸಲಾಗಿದ್ದು, ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಟ್ವಿಟ್ಟರ್`ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್`ಗಳಲ್ಲಿ ಈ ಕ್ಯಾಂಟೀನ್ ಆರಂಭವಾಗಲಿದ್ದು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೆ 5 ರೂಪಾಯಿಗೆ ತಿಂಡಿ ಮತ್ತು 10 ರೂಪಾಯಿಗೆ ಊಟ ಒದಗಿಸುವ ಜನಪ್ರಿಯ ಯೋಜನೆ ಇದಾಗಿದೆ.

ನಮ್ಮ ಕ್ಯಾಂಟೀನ್ ಹೆಸರನ್ನ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡುವಂತೆ ಕಾಂಗ್ರೆಸ್ ಶಾಸಕರು ಸಿಎಂ ಮೇಲೆ ಒತ್ತಡ ಹಾಕಿದ್ದರು. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಯಶೋಮಾರ್ಗಕ್ಕೆ ಒಲಿದ ಗಂಗೆ.. ಬರದ ನಾಡಲ್ಲಿ ಭಗೀರಥನಾದ ರಾಕಿಂಗ್ ಸ್ಟಾರ್