Select Your Language

Notifications

webdunia
webdunia
webdunia
webdunia

ನಡು ರಸ್ತೆಯಲ್ಲಿ ನಮಾಜ್, ಮಂಗಳೂರಿನಲ್ಲಿ ವಿವಾದ

Namaz

Krishnaveni K

ಮಂಗಳೂರು , ಸೋಮವಾರ, 27 ಮೇ 2024 (12:47 IST)
ಮಂಗಳೂರು: ಸಾರ್ವಜನಿಕರು ಓಡಾಡುವ ನಡು ರಸ್ತೆಯಲ್ಲಿ ನಮಾಜ್ ಮಾಡಿರುವ ವಿಚಾರ ಈಗ ಮಂಗಳೂರಿನ ಕಂಕನಾಡಿಯಲ್ಲಿ ವಿವಾದಕ್ಕೀಡಾಗಿದೆ.

ಇದರಿಂದಾಗಿ ರಸ್ತೆಯಲ್ಲಿ ಓಡಾಡುವವರು ತೊಂದರೆ ಅನುಭವಿಸಬೇಕಾಗಿ ಬಂದಿದೆ. ಇದರ ಬಗ್ಗೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ಕಳೆದ ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ಮೊದಲು ಬೆಂಗಳೂರಿನಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಕೂಡಾ ನೀಡಲಾಗಿತ್ತು. ಇದೀಗ ಕಂಕನಾಡಿ ಮಸೀದಿ ಮುಂದಿನ ರಸ್ತೆಯಲ್ಲಿ ಅಂತಹದ್ದೇ ಘಟನೆ ನಡೆದಿದೆ.

ಇದರಿಂದಾಗಿ ಈ ರಸ್ತೆಯಲ್ಲಿ ಓಡಾಡಬೇಕಾಗಿದ್ದ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಬೇಕಾಗಿ ಬಂದಿದೆ. ಪ್ರಾರ್ಥನೆ ಏನಿದ್ದರೂ ಸಾರ್ವಜನಿಕರು ಓಡಾಡುವ ಜಾಗದಲ್ಲೇ ಸಾರ್ವಜಜನಿಕರಿಗೆ ತೊಂದರೆ ನೀಡುವಂತೆ ಮಾಡುವ ಅಗತ್ಯವೇನಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ಸಮಯದ ಹಿಂದೆ ದೆಹಲಿಯಲ್ಲಿ ಇದೇ ರೀತಿ ರಸ್ತೆಯಲ್ಲಿ ನಮಾಜ್ ಮಾಡಿದವರ ಮೇಲೆ ಪೊಲೀಸರು ಬೂಟು ಕಾಲಿನಿಂದ ಒದ್ದ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ ಆನೆ ಹೆಸರಿನಲ್ಲಿ ನಟ ದರ್ಶನ್ ಗೆ ವಂಚನೆ