ಬಿಜೆಪಿಯನ್ನು ಒಪ್ಪಿಕೊಂಡ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್

Webdunia
ಶನಿವಾರ, 25 ಸೆಪ್ಟಂಬರ್ 2021 (21:53 IST)
ಪಂಡಿತ್ ಉಪಾಧ್ಯಾಯರು ಹಾಕಿಕೊಟ್ಟ ಪಥದಲ್ಲಿ ಬಿಜೆಪಿ ವಿಜಯಪತಾಕೆಯೊಂದಿಗೆ ದೇಶದಲ್ಲಿ ಮುನ್ನಡೆಯುತ್ತಿದೆ. ಎಲ್ಲರೂ ಬಿಜೆಪಿಯನ್ನು ಒಪ್ಪಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ದೀನ್‍ದಯಾಳ್ ಉಪಾಧ್ಯಾಯರು ಮತ್ತು ಶ್ಯಾಮಪ್ರಸಾದ್ ಮುಖರ್ಜಿ ಅವರು ಸೇರಿಕೊಂಡು ಡಾ. ಅಂಬೇಡ್ಕರ್ ಅವರನ್ನು ಸಂಸದರನ್ನಾಗಿ, ಸಚಿವರನ್ನಾಗಿ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ಪಕ್ಷ, ಜಗತ್ತಿನ ನಂಬರ್ ವನ್ ಪಕ್ಷವಾಗಿ ಹೊರಹೊಮ್ಮಲು ಉಪಾಧ್ಯಾಯರು ಹಾಕಿಕೊಟ್ಟ ಭದ್ರ ತಳಪಾಯ ಕಾರಣ ಎಂದರು‌.
ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಬಿಜೆಪಿಗೆ ಶಾಶ್ವತ ತಳಹದಿಯನ್ನು ನೀಡಿದ್ದಾರೆ. ಅವರೊಬ್ಬ ಮೇರು ವ್ಯಕ್ತಿ ಎಂದರು.
ಉಪಾಧ್ಯಾಯರ ಸಿದ್ಧಾಂತದಡಿ ಜನಸಂಘದ ಚಿಹ್ನೆಯಾದ ದೀಪ ಮತ್ತು ಬಿಜೆಪಿ ಚಿಹ್ನೆಯಾದ ಕಮಲವು ದೇಶದಲ್ಲಿ ಬಹಳ ದೊಡ್ಡ ವಿಕಾಸವನ್ನು ಪಡೆದಿದೆ. ಆದರೆ, ಸಿದ್ಧಾಂತ ಎಲ್ಲೂ ಅಲುಗಾಡಿಲ್ಲ ಎಂದರು.
ಕಾಂಗ್ರೆಸ್ ಪಕ್ಷವು ಎ ಯಿಂದ ಜೆಡ್ ವರೆಗೆ ವಿಭಜನೆಯಾಗಿದೆ. ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ವಿಭಜನೆಗೊಂಡಿವೆ. ಕಾಶ್ಮೀರದ ಕುರಿತ ನಮ್ಮ ನಾಯಕರ ಕನಸನ್ನು ನನಸು ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಮಾಡಿದ ಬಿಜೆಪಿ ಕೇಂದ್ರ ಸರ್ಕಾರದ ಮಹತ್ವದ ಕ್ರಮವನ್ನು ಶ್ಲಾಘಿಸಿದರು.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ತಿಳಿಸಿ, ಆ ರಾಜ್ಯಕ್ಕೆ ಸಂಬಂಧಿಸಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಮತ್ತು ಶ್ಯಾಮಪ್ರಸಾದ್ ಮುಖರ್ಜಿ ಅವರು ದೊಡ್ಡ ಹೋರಾಟ ಮಾಡಿದ್ದರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಮುಖ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ತಿಳಿಸಿದರು.
ಇಡೀ ದೇಶ ಏಕಾತ್ಮಕತೆಯೊಂದಿಗೆ ಜೋಡಣೆಯಾಗಬೇಕು. ಜಾತಿ, ಮತ, ಪಂಥ, ಧರ್ಮ ಬೇರೆ ಇದ್ದರೂ ಆತ್ಮ ಎಲ್ಲರಿಗೂ ಒಂದೇ ಇರುತ್ತದೆ. ಭಾರತೀಯ ಸಿದ್ಧಾಂತ, ಭಾರತೀಯ ಅಧ್ಯಾತ್ಮದೊಂದಿಗೆ ನಾವೆಲ್ಲರೂ ಒಂದಾಗಬೇಕು ಎಂದು ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಆಶಿಸಿದ್ದರು. ಅಂಥ ಏಕಾತ್ಮ ಮಾನವವಾದವನ್ನು ಅವರು ನೀಡಿದ್ದು, ಆ ಸಿದ್ಧಾಂತವನ್ನು ನಾವು ಪಾಲಿಸುತ್ತಿದ್ದೇವೆ ಎಂದರು.
ಸ್ವದೇಶಿ ಆರ್ಥಿಕ ಚಿಂತನೆ:
ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ನಮ್ಮ ಭಾರತೀಯ ಜನಸಂಘದ ಮೊದಲನೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಜನಸಂಘ ಮತ್ತು ಭಾರತೀಯ ಜನತಾ ಪಾರ್ಟಿಗೆ ಅವರು ಸಿದ್ಧಾಂತವನ್ನು ಹಾಕಿಕೊಟ್ಟರು. ಅದೇ ಸಿದ್ಧಾಂತದಡಿ ಬಿಜೆಪಿ ಮುನ್ನಡೆಯುತ್ತಿದೆ. ಸ್ವದೇಶಿ ಆರ್ಥಿಕ ಚಿಂತನೆ ಅಥವಾ ಗಾಂಧಿ ಪ್ರಣೀತವಾದ ಆರ್ಥಿಕವಾದ, ಗಾಂಧಿ ಪ್ರಣೀತವಾದ ನೈಜ ಪ್ರಜಾಪ್ರಭುತ್ವ ಮತ್ತು ನಿಜವಾದ ಜಾತ್ಯತೀತವಾದದ ತತ್ವ ಪಾಲಿಸಿಕೊಂಡು ಪಕ್ಷ ಮುಂದೆ ಸಾಗುತ್ತಿದೆ. ಯಾವತ್ತೂ ನಾವು ಭಾರತದ ಏಕತೆಯೊಂದಿಗೆ ರಾಜಿ ಮಾಡಿಕೊಂಡಿಲ್ಲ ಎಂದು ತಿಳಿಸಿದರು.
18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ:
ಬಡ ವ್ಯಕ್ತಿಗೆ ನ್ಯಾಯದ ಚಿಂತನೆ ಉಪಾಧ್ಯಾಯರ ಪರಿಕಲ್ಪನೆ ಆಗಿತ್ತು. ಅದಕ್ಕಾಗಿ ಕೊನೆಯ ಬಡ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಉಜ್ವಲ, ಕಿಸಾನ್ ಸಮ್ಮಾನ್, ಜನ್‍ಧನ್ ಮತ್ತಿತರ ಯೋಜನೆಗಳನ್ನು ರೂಪಿಸಲಾಗಿದೆ. ಗ್ರಾಮೀಣ ಬಡವರನ್ನು ಗಮನದಲ್ಲಿ ಇಟ್ಟುಕೊಂಡೇ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಹಲವು ದಶಕದ ದೇಶದ ಆಡಳಿತದಲ್ಲಿ ವಿದ್ಯುತ್ ಸಿಗದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು. ಕೋವಿಡ್ ಹಿನ್ನೆಲೆಯಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ ಎಂದರು.
ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಎಸ್.ಎಸ್. ಮಿಟ್ಟಲ್‍ಕೋಡ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯ ಸಿಬ್ಬಂದಿ  ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

Bengaluru Rains: ಬೆಂಗಳೂರಿನಲ್ಲಿ ದಿಡೀರ್ ಭಾರೀ ಮಳೆ

ಕೃಷಿ ಸಚಿವರು ಡೆಲ್ಲಿಗೆ ಬೇರೆ ಕೆಲಸಕ್ಕೆ ಹೋಗಿದ್ದಾರೆ ಬಿಡಯ್ಯಾ: ಮಾಧ್ಯಮಗಳ ಮೇಲೆ ಗರಂ ಆದ ಸಿಎಂ

ದೆಹಲಿಗೆ ಹೋದ ಶಾಸಕರಿಗೆ ಖುದ್ದು ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ

ದೇವೇಗೌಡರ ಮಕ್ಕಳು ನನ್ನ ಸಿಎಂ ಆಗಲು ಬಿಡ್ತಿರಲಿಲ್ಲ ಎಂದಿದ್ದ ಸಿದ್ದರಾಮಯ್ಯಗೆ ಜೆಡಿಎಸ್ ತಿರುಗೇಟು

ಮುಂದಿನ ಸುದ್ದಿ
Show comments