Publish Date: Mon, 27 Feb 2017 (11:10 IST)
Updated Date: Mon, 27 Feb 2017 (11:23 IST)
ಆಸ್ತಿಗಾಗಿ ಪಾಪಿ ಭಾವನೊಬ್ಬ ನಾದಿನಿಯನ್ನ ಕೊಂದಿರ ಬೆಂವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೀಡಾದ ಯುವತಿಯನ್ನ ಪವಿತ್ರಾ ಎಂದು ಗುರ್ತಿಸಲಾಗಿದ್ದು, ಕೊಲೆಪಾತಕ ಭಾವ ಜಗದಿಶ್`ನನನ್ನ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ರೂಮಿನಲ್ಲಿ ಮಲಗಿದ್ದ ಪವಿತ್ರಾ ಬಾಯಿಗೆ ಬಟ್ಟೆ ತುರುಕಿ ಕೊಂದಿರುವ ಜಗದೀಶ್ ಬಳಿಕ ಅತ್ತೆ ಬಳಿ ಬಂದು ಪವಿತ್ರಾ ಮೂರ್ಛೆ ಹೋಗಿದ್ದಾಳೆ. ಮಂತ್ರಾ ಹಾಕಿಸಿದರೆ ಸರಿಹೋಗಬಹುದೆಂದು ಕರೆದೊಯ್ದು ಬಳಿಕ ಶವದೊಂದಿಗೆ ಬಂದಿದ್ದಾನೆ. ಅನುಮಾನಗೊಂಡ ಅತ್ತೆ ಪೊಲಿಸರಿಗೆ ದೂರು ನೀಡಿದಾಗ ಕೊಲೆ ಪ್ರಕರಣ ತೆರೆದುಕೊಂಡಿದೆ.
ಆಸ್ತಿಯಲ್ಲಿ ಮಕ್ಕಳಿಬ್ಬರಿಗೂ ಮಾವ ಸಮಭಾಗ ನಿಡಿದ್ದರು. ಪವಿತ್ರಾಳನ್ನ ಕೊಂದುಬಿಟ್ಟರೆ ಸಂಪೂರ್ಣ ಸ್ತಿ ನನಗೆ ಸಿಗಲಿದೆ ಎಂದು ದುರಾಲೋಚನೆಗೆ ಬಿದ್ದ ಜಗದೀಶ್ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.