Daily Horoscope
✕

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ಪ್ರಿಯಕರನ ಜತೆ ಸೇರಿ ಗಂಡನನ್ನೇ ಮುಗಿಸಿದ ಪಾಪಿ ಪತ್ನಿ

Webdunia
ಭಾನುವಾರ, 19 ಏಪ್ರಿಲ್ 2026 (12:15 IST)
ಮೈಸೂರು: ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾದನೆಂದು ಆತನನ್ನೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ನಡೆದಿದೆ.

ಪತ್ನಿಯಿಂದಲೇ ಕೊಲೆಯಾದ ಪತಿಯನ್ನು ಕುರ್ಣೇಗಾಲದ ಜವರಪ್ಪ ಎಂದು ಗುರುತಿಸಲಾಗಿದೆ.  ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32), ಕುರ್ಣೆಗಾಲ ಗ್ರಾಮದ ಅಮೃತಾ (26) ಬಂಧಿತ ಆರೋಪಿಗಳು. 

ಅನುಮಾನಸ್ಪದ ರೀತಿಯಲ್ಲಿ ಜವರಪ್ಪ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. 

ಕೊಲೆ ಆರೋಪಿ ಸಿದ್ದೇಶ್‌ ಮೃತನ ಪತ್ನಿ ಅಮೃತಾ ಜತೆಗೆ ಅಕ್ರಮ ಸಂಬಂಧವಿತ್ತು. ತಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾದನೆಂದು ಗಂಡನ ಕೊಲೆ ಪ್ಲ್ಯಾನ್ ಮಾಡಿದ್ದಾನೆ. 

ಕುರ್ಣೇಗಾಲ ಗ್ರಾಮದ ಜವರಪ್ಪ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳನ್ನ ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ ಆಗುತ್ತಿತ್ತು. 

12 ದಿನಗಳ ಹಿಂದೆ ಮಕ್ಕಳೊಂದಿಗೆ ಹಬ್ಬಕ್ಕೆಂದು ಅಮೃತ ತವರಿಗೆ ಹೋಗಿದ್ದಳು. ಏ.16 ರಂದು ಹೆಂಡತಿ ಮನೆಗೆ ಹೋಗಿ ಬರುತ್ತೇನೆಂದು ಜವರಪ್ಪ ಹೋಗಿದ್ದ. ಅಲ್ಲಿಯೆ ಈ ಕೊಲೆ ನಡೆದಿದೆ. ಕೊಲೆ ಮಾಡಿ ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಮೃತದೇಹ ಬಿಸಾಕಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ರೂ ದಾಟಿದ್ರಾ… ತನ್ನವರ ಬಳಗದ ಮೇಲೆ ಆನೆಗೆ ಎಂಥಾ ಪ್ರೀತಿ..: ವೈರಲ್ Video

4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಲಿಖಿತ ಭರವಸೆ ನೀಡುವವರೆಗೂ ಹೋರಾಟ ಕೈಬಿಡದಿರಲು ಪಟ್ಟು

ಬಂಗಾಳಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತದ ಭೀತಿ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಕರ್ಮ ರಿಟರ್ನ್ಸ್…ಭಾರತೀಯ ಯೋಧನಿಗೇ ದಂಡ ಹಾಕಿ ಶೈನ್ ಆಗಲು ಹೊರಟ ಮಹಿಳಾ ಅಧಿಕಾರಿ: ಕೊನೆಗೆ ಆಗಿದ್ದೇ ಬೇರೆ video

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಬಂದಿದ್ದಕ್ಕೆ ನೌಕರನಿಗೆ ಇದೆಂಥಾ ಅನ್ಯಾಯ: ಖಾಸಗಿ ಸಂಸ್ಥೆ ವಿರುದ್ಧ ಭಾರೀ ಆಕ್ರೋಶ video

ಮುಂದಿನ ಸುದ್ದಿ
Show comments