ಮೆರವಣಿಗೆ ನಡೆಸಲು ಪೊಲೀಸರಿಂದ ಅನುಮತಿ ನಿರಾಕರಿಸಿದ ಬೆನ್ನಿಗೇ ಅಶೋಕಪುರಂನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪಾರ್ಕ್‌ನಲ್ಲಿ ಮಹಿಷ ದಸರಾ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಕೆ.ಎಸ್.ಭಗವಾನ್, ಪ್ರೊ.ಮಹೇಶ್ ಚಂದ್ರಗುರು, ಪ್ರೊ. ನಂಜರಾಜೆ ಅರಸ್, ಮಾಜಿ ಮೇಯರ್ ಪುರುಷೋತ್ತಮ್ ಸೇರಿ ಅನೇಕರು ಭಾಗವಹಿಸಿದ್ದರು.
ಮಹಿಷ ದಸರಾ ಹೋರಾಟ ಸಮಿತಿ ವತಿಯಿಂದ ಮೆರವಣಿಗೆಗೆ ಅನುಮತಿ ಕೋರಲಾಗಿತ್ತು. ಆದರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ, ಪಾರ್ಕ್‌ನಲ್ಲೆ ಆಚರಣೆ ಮಾಡಲು ಸಮಿತಿ ನಿರ್ಧಾರ ಮಾಡಿತ್ತು. ಪಾರ್ಕ್ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮಹಿಷ ದಸರಾ ಶುಭಾಶಯ ಕೋರಿದ ಜ್ವಾನಪ್ರಕಾಶ್ ಸ್ವಾಮೀಜಿ, ಸೋಮವಾರ ದಸರಾ ಆಚರಣೆ ನಡೆಸಲಾಗುವುದು. ದಸರಾ ಉದ್ಘಾಟನೆಗೆ ಹೋಗಬೇಕಾದರೆ ಮುಖಮಂತ್ರಿಗಳು ಯಾವ ಮಾರ್ಗದಲ್ಲಿ ತೆರಳುತ್ತಾರೆ? ಮಹಿಷನ ದರ್ಶನ ಪಡೆದೇ ಹೋಗಬೇಕು. ಆದರೂ ಮಹಿಷ ದಸರಾ ಆಚರಣಗೆ ತಡೆವೊಡ್ಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.