Daily Horoscope
✕

ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ : ರಮೇಶ್ ಜಾರಕಿಹೊಳಿ

Webdunia
ಬುಧವಾರ, 19 ಏಪ್ರಿಲ್ 2023 (09:46 IST)
ಬೆಳಗಾವಿ : ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸಿ ಚುನಾವಣೆಯನ್ನು ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ನಾಮಪತ್ರ ಸಲ್ಲಿಸಲು ಯುವಕರ ದಂಡೇ ಹರಿದು ಬಂದಿದೆ. ನಾನು ಯಾವತ್ತೂ ನನ್ನ ಎದುರಾಳಿಯನ್ನು ಪ್ರಬಲ ಅಭ್ಯರ್ಥಿ ಎಂದು ಪರಿಗಣಿಸುತ್ತೇನೆ.

ಜನ ಹೆಚ್ಚಿದ್ದಾರೆ ಎಂದು ಹಿಗ್ಗುವುದಿಲ್ಲ. ಹಾಗೆಯೇ ಕಡಿಮೆ ಜನ ಸೇರಿದ್ದಾರೆ ಎಂದು ಕುಗ್ಗುವುದಿಲ್ಲ. ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ತಿಳಿದು ಚುನಾವಣೆ ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದರು.

ಅಮರನಾಥ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಪುತ್ರ ಮಂಗಳವಾರ ಡಮ್ಮಿ ನಾಮಪತ್ರ ಸಲ್ಲಿಸಿದ್ದಾರೆ. ಅದನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

174 ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ ಇಸ್ರೇಲ್‌ನಿಂದ ಉನ್ನತ ಗೌರವ

ಫಾರಂ-7 ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ದೋಷಾರೋಪಪಟ್ಟಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಬಯಲು

ಎಲ್ಲರೆದುರೇ ಬ್ಯಾಂಕ್ ನಲ್ಲೇ ಮಹಿಳೆಯ ಲಕ್ಷ ಹಣ, ಪಾಸ್ ಬುಕ್ ಎಗರಿಸಿದ ಖತರ್ನಾಕ್ ಖದೀಮ: video

ಹರಿದ್ವಾರ ಹೆದ್ದಾರಿಯಲ್ಲಿ ಮಹಿಳೆಯರ ಕಾರು ಚೇಸ್ ಮಾಡಿ ಅಸಭ್ಯ ವರ್ತನೆ: Video

ಮುಂದಿನ ಸುದ್ದಿ
Show comments