Select Your Language

Notifications

webdunia
webdunia
webdunia
webdunia

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪತಿ ಬಯಸಿದ್ದರು: ರುದ್ರೇಶ್ ಪತ್ನಿ ವಿದ್ಯಾವತಿ

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪತಿ ಬಯಸಿದ್ದರು: ರುದ್ರೇಶ್ ಪತ್ನಿ ವಿದ್ಯಾವತಿ
ಬೆಂಗಳೂರು , ಶುಕ್ರವಾರ, 4 ನವೆಂಬರ್ 2016 (15:32 IST)
ಹತ್ಯೆಯಾದ ಬಿಜೆಪಿ ಮುಖಂಡ ರುದ್ರೇಶ್ ಬಿಜೆಪಿ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು ಎಂದು ರುದ್ರೇಶ್ ಪತ್ನಿ ವಿದ್ಯಾವತಿ ಹೇಳಿದ್ದಾರೆ.
 
ಸದ್ದಿಗಾರರೊಂದಿಗೆ ಮಾತನಾಡಿದ ಅವರು, ರುದ್ರೇಶ್ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಬಂಧಿಸಬೇಕು. ಸಚಿವ ರೋಷನ್ ಬೇಗ್ ಆಗಲಿ ಅಥವಾ ಬೇರೆ ಯಾರಾದರೂ ಆಗಿರಲಿ ಅವರನ್ನು ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
 
ಪತಿ ರುದ್ರೇಶ್ ಹತ್ಯೆಯ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸಿದಲ್ಲಿ ಸತ್ಯ ಸಂಗತಿ ಬಹಿರಂಗವಾಗಲಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
 
ರುದ್ರೇಶ್ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿದ್ದರಿಂದ ಶಿವಾಜಿ ನಗರದಲ್ಲಿ ಹೆಚ್ಚು ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
 
ಇದೀಗ ಸೆರೆಸಿಕ್ಕಿರುವ ಆರೋಪಿಗಳ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಇದರ ಹಿಂದೆ ಬೇರೆಯವರ ಕೈವಾಡವಿದೆ ಎಂದು ರುದ್ರೇಶ್ ಪತ್ನಿ ವಿದ್ಯಾವತಿ ಸಂಶಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಿಗಮ, ಮಂಡಳಿ ಅಧ್ಯಕ್ಷತೆ ಕುರಿತು ಶಾಸಕರ ಅಸಮಾಧಾನವಿಲ್ಲ: ಸಿಎಂ ಸಿದ್ದರಾಮಯ್ಯ