Publish Date: Wed, 08 Mar 2023 (11:15 IST)
Updated Date: Wed, 08 Mar 2023 (00:17 IST)
ಮೈಸೂರು : ಬಡವರ ಪರವಾಗಿ ನನ್ನ ಹೃದಯ ಮಿಡಿಯುತ್ತದೆ. ನನಗೆ ಬಡವರ ಕಷ್ಟ ಗೊತ್ತಿದೆ. ಬಡವರ ಕಲ್ಯಾಣಕ್ಕಾಗಿ ನಾನು ದುಡಿಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರಿನಲ್ಲಿ ಸರ್ಕಾರದ ಫಲಾನುಭಾವಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ವಿಧಾನಸೌಧದಲ್ಲಿ ಇಲ್ಲ. ನಮ್ಮ ಸರ್ಕಾರ ನಿಮ್ಮ ಮನೆಗಳಲ್ಲಿ ಇದೆ. ನಿಮ್ಮ ಬಳಿಗೆ ಬಂದು ಸರ್ಕಾರ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಬಡವರ ಪರ ಮಿಡಿಯುವ ಹೃದಯದ ನಾಯಕ.
ಬಡವರ ಪರವಾಗಿ ಯಡಿಯೂರಪ್ಪ ಅವರು ಹತ್ತು ಹಲವು ಯೋಜನೆ ಜಾರಿಗೆ ತಂದರು. ನಾವು ಮಾಡಿರುವ ಒಳ್ಳೆಯ ಕೆಲಸಕ್ಕೆ ಜನರ ಬೆಂಬಲ ಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದರು.