Publish Date: Fri, 05 Jan 2018 (19:53 IST)
Updated Date: Fri, 05 Jan 2018 (19:55 IST)
ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮ ಸೇನೆ ಸಂಘಟನೆ ನಿಷೇಧ ಮಾಡಿ, ಪರಿಣಾಮ ಎದುರಿಸಲಿ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
ಪಿಎಫ್‍ಐ, ಕೆಎಫ್‍ಡಿ ದೇಶದ್ರೋಹಿ ಸಂಘಟನೆಗಳು. ಅವುಗಳನ್ನು ನಿಷೇಧ ಮಾಡಬೇಕು. ಹಿಂದು ಸಂಘಟನೆಗಳು ದೇಶ ದ್ರೋಹಿ ಸಂಘಟನೆಗಳಲ್ಲ. ಸರ್ಕಾರಕ್ಕೆ ತಾಕತ್ತಿದ್ರೆ ಶ್ರೀರಾಮ ಸೇನೆ ನಿಷೇಧ ಮಾಡಿ, ಪರಿಣಾಮ ಎದುರಿಸಲಿ ಎಂದಿದ್ದಾರೆ.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಪಿಎಫ್‍ಐ ಸಂಘಟನೆಯನ್ನ ಯಾಕೆ ನಿಷೇಧ ಮಾಡಲಿಲ್ಲ ಎಂದು ಪ್ರಶ್ನಿಸಿದ ಮುತಾಲಿಕ್ ಅವರು, ಎರಡು ರಾಷ್ಟ್ರೀಯ ಪಕ್ಷಗಳು ನಿರ್ಲಜ್ಜ ಪಕ್ಷಗಳು. ಸಾವಿನಲ್ಲಿ ರಾಜಕಾರಣ ಮಾಡುತ್ತಿವೆ ಎಂದು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.