Publish Date: Wed, 11 May 2022 (19:50 IST)
Updated Date: Wed, 11 May 2022 (19:53 IST)
ಮಂಡ್ಯದಲ್ಲಿ ಹಿಜಾಬ್ ಪ್ರಕರಣದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಸಂಚಲನ ಸೃಷ್ಟಿಸಿದ್ದ ವಿದ್ಯಾರ್ಥಿನಿ ಬಿ.ಬಿ.ಮುಸ್ಕಾನ್ ವಿದೇಶಕ್ಕೆ ತೆರಳಿದ್ದಾರೆ.. ಈ ಘಟನೆಯಿಂದ ಮುಸ್ಕಾನ್ಗೆ ಅಪಾರ ಪ್ರಚಾರ ಸಿಕ್ಕಿತ್ತು.. ಇತ್ತೀಚೆಗೆ ಪರೀಕ್ಷೆಗಳಿಗೆ ಮುಸ್ಕಾನ್ ಹಾಜರಾಗಿರಲಿಲ್ಲ.. ಇದೀಗ ಮುಸ್ಕಾನ್ ವಿದೇಶಕ್ಕೆ ತೆರಳಿರುವ ಬಗ್ಗೆ ವರದಿಯಾಗಿದೆ..ಮದೀನಾದಿಂದ ಸೆಲ್ಫಿ ವಿಡಿಯೋ ಹಂಚಿಕೊಂಡಿರುವ ಮುಸ್ಕಾನ್ ತಂದೆ ಮಹಮ್ಮದ್ ಹುಸೇನ್, ನಮ್ಮ ಮಂಡ್ಯದಲ್ಲಿರುವ ಎಲ್ಲಾ ಅಕ್ಕತಂಗಿ-ಅಣ್ಣ ತಮ್ಮಂದಿರಿಗೂ ನಮಸ್ಕಾರ. ನಾನು ಮದೀನಾದ ಒಳಗಡೆ ಇದ್ದೇನೆ. ಇನ್ ಷಾ ಅಲ್ಲಾ, ನಿಮಗೆಲ್ಲರಿಗೂ ಒಳ್ಳೆಯದಾಗಲಿ. ನಾನು ಎಲ್ಲರಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ಇನ್ನೂ ಹೆಚ್ಚು ಪ್ರಾರ್ಥನೆ ಮಾಡ್ತೇನೆ. ನಮ್ಮ ಮಂಡ್ಯ ಹಾಗೂ ಇಂಡಿಯಾದಲ್ಲಿ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಒಟ್ಟಾಗಿ ಸೌಹಾರ್ದತೆಯಿಂದ ಬಾಳೋಣ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ. ಆ ದೇವರು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಸೆಲ್ಫಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.