Publish Date: Thu, 15 Nov 2018 (14:31 IST)
Updated Date: Thu, 15 Nov 2018 (14:33 IST)
ಮುಖ್ಯಮಂತ್ರಿ ಎದುರಲ್ಲೇ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ವಾಗ್ವಾದ ನಡೆಸಿದ ಘಟನೆ ವರದಿಯಾಗಿದೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎದುರಲ್ಲೇ ಮಾತಿನ ಚಕಮಕಿ ನಡೆದಿದೆ. ಫಸಲ್ ಭೀಮಾ ಯೋಜನೆ ಸರಿಯಾಗಿ ಅನುಷ್ಟಾನಕ್ಕೆ ಬಂದಿಲ್ಲಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಫಸಲ್ ಭೀಮಾ ಯೋಜನೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಈಶ್ವರ್ ಖಂಡ್ರೆ ಗರಂ ಆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬೀದರ್ ಸಂಸದ ಭಗವಂತ್ ಖೂಬಾ, ಸುಮ್ಮನೆ ಆರೋಪ ಮಾಡಬೇಡಿ ಎಂದು ವಾಕ್ಸಮರಕ್ಕೆ ಇಳಿದರು. ಯಾವ ರೀತಿ ಎಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ತೋರಿಸಿ ಅಂತಾ ಎರು ಧ್ವನಿಯಲ್ಲಿ ಸಂಸದ ಭಗವಂತ್ ಖೂಬಾ ಮಾತನಾಡಿದರು.