ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

Webdunia
ಭಾನುವಾರ, 1 ಮೇ 2016 (12:14 IST)
ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿದ ತಾಯಿಯೋರ್ವಳು ತಾನು ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಕುಣಿಘಲ್ ತಾಲ್ಲೂಕಿನ ಗಾಣಿಮೇಸ್ತ್ರರಪಾಳ್ಯ ಗ್ರಾಮದಲ್ಲಿ ನಡೆದಿದೆ. 
 
ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಚಂದ್ರಮ್ಮ(26) ಮತ್ತು ಮಕ್ಕಳನ್ನು ಗೌತಮ್ ಮತ್ತು ಧನು ಎಂದು ಗುರುತಿಸಲಾಗಿದೆ. ಮೂವರು ಪ್ರತಿಶತ 50 ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದಾರೆ.
 
ಚಂದ್ರಮ್ಮ ಪತಿ ಮುದ್ದೆಕೋಲಿನಿಂದ ಹೊಡೆದು ಆಕೆಯ ಕಾಲು ಮುರಿದಿದ್ದ. ಇದರಿಂದ ನೊಂದಿದ್ದ ಚಂದ್ರಮ್ಮ ತನ್ನ ಪುಟ್ಟ ಮಕ್ಕಳಿಬ್ಬರಿಗೂ ಸೀಮೆಎಣ್ಣೆ ಸುರಿದು ತಾನು ಕೂಡ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
 
ಗಂಭೀರವಾಗಿ ಗಾಯಗೊಂಡಿರುವ ತಾಯಿ-ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು ಕುಣಿಘಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್, ಇರಾನ್ ನಡುವಿನ ಯುದ್ಧದಿಂದ ಕರ್ನಾಟಕದ ಮೇಲಾಗುವ ಪರಿಣಾಮಗಳೇನು: ಟಾಪ್ 4 ಅಂಶಗಳು ಇಲ್ಲಿವೆ

ಇರಾನ್ ಖಮೇನಿ ಹತ್ಯೆಗೆ ಭಾರತ ಸರ್ಕಾರದ ಮೌನ ನುಣುಚಿಕೊಳ್ಳುವ ಪ್ರಯತ್ನ: ಸೋನಿಯಾ ಗಾಂಧಿ ಟೀಕೆ

ಅಬುದಾಬಿಯಿಂದ ಸೇಫ ಆಗಿ ಕರ್ನಾಟಕದಲ್ಲಿ ಲ್ಯಾಂಡ್ ಆದ ಕನ್ನಡಿಗರು

Karnataka Weather: ಇಂದು ಮತ್ತಷ್ಟು ಬಿಸಿಯಾಗಿರಲಿದೆ ವಾತಾವರಣ

ಅಲಿ ಖಮೇನಿ ಸಾವಿನ ಬಳಿಕ ಕೋಮಾಕ್ಕೆ ಜಾರಿದ ಪತ್ನಿ ಕೂಡಾ ಇನ್ನಿಲ್ಲ

ಮುಂದಿನ ಸುದ್ದಿ
Show comments