ಸೆಲ್ಫಿ ತೆಗೆದುಕೊಳ್ಳಲು ಹೋಗಿ ಗುಂಡು ಹಾರಿಸಿಕೊಂಡ

Webdunia
ಭಾನುವಾರ, 1 ಮೇ 2016 (11:43 IST)
ಸೆಲ್ಫಿ ಕ್ರೇಜ್‌ನಿಂದ ಪ್ರಾಣಕ್ಕೆ ಆಪತ್ತು ತೆಗೆದುಕೊಳ್ಳುವ ಘಟನೆಗಳು ಇತ್ತೀಚಿಗೆ ಪದೇ ಪದೇ ವರದಿಯಾಗುತ್ತಿವೆ. 15 ವರ್ಷದ ಬಾಲಕನೋರ್ವ ರಿವಾಲ್ವರ್ ಹಿಡಿದುಕೊಂಡು ಸೆಲ್ಫಿ ಕ್ಲಿಕ್ಕಿಸಲು ಹೋಗಿ ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಪಂಜಾಬ್‌ನಲ್ಲಿ ನಡೆದಿದೆ. 
 
ಪಠಾಣ್‌ಕೋಟ್‌ನ ಶಿವನಗರ್‌‌‌‌ದ ನಿವಾಸಿ ರಮಣದೀಪ್ ಸಿಂಗ್ ಎಂಬ 15 ವರ್ಷದ ಬಾಲಕ, ಮನೆಯಲ್ಲಿದ್ದ ಲೋಡ್ ಆಗಿದ್ದ ಗನ್ ಎತ್ತಿಕೊಂಡು ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾನೆ. ಈ ವೇಳೆ ಅರಿವಿಲ್ಲದೇ ರಿವಾಲ್ವರ್ ಟ್ರಿಗರ್‌‌ನ್ನು ಒತ್ತಿ ಬಿಟ್ಟಿದ್ದಾನೆ. ಪರಿಣಾಮ, ರಮಣದೀಪ್ ತಲೆಗೆ ಗುಂಡು ತಗುಲಿದ್ದು ಗಂಭೀರವಾಗಿ ಗಾಯಗೊಂಡ ಆತನನ್ನು ಲೂಧಿಯಾನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. 
 
ರಮಣದೀಪ್ ಸಿಂಗ್ ತಂದೆ ಗುರುಪಾಲ್ ಸಿಂಗ್ ಪ್ರಾಪರ್ಟಿ ಡೀಲರ್ ಆಗಿದ್ದು, ಪರವಾನಿಗೆ ಮೇಲೆ ರಿವಾಲ್ವರ್ ಇಟ್ಟುಕೊಂಡಿದ್ದರು. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಬಾಲಕ ಚೇತರಿಸಿಕೊಂಡ ಬಳಿಕ ಘಟನೆಯ ತನಿಖೆ ನಡೆಸುವುದಾಗಿ ಹೇಳಿದ್ದಾರೆ. 

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ತೆಯ ಅಂತ್ಯಸಂಸ್ಕಾರಕ್ಕೆ ನದಿಕ್ಕಿಳಿದ ಅಳಿಯ ಮೊಸಳೆ ದಾಳಿಗೆ ಬಲಿ

ರಾಜಕೀಯ ನಾಯಕನಾಗಿ, ನೀವು ಸೂಕ್ಷ್ಮವಾಗಿರಲು ಸಾಧ್ಯವೇ: ರಾಘವ್ ಚಡ್ಡಾಗೆ ದೆಹಲಿ ಹೈಕೋರ್ಟ್‌

ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ

ತೀವ್ರ ಬಿಸಿಗಾಳಿ: ಸುಸ್ತಾದ ಬಿಹಾರದ ಜನತೆ

ದೇಶ ಮೋದಿಯನ್ನು ನಂಬಿದೆ, ರಾಹುಲ್ ಗಾಂಧಿ ಮಾತ್ರ ನಕಾರಾತ್ಮಕ ಮನಸ್ಥಿತಿಯನ್ನು ತೋರಿಸು‌ತ್ತಿದ್ದಾರೆ: ಪಿಯೂಸ್ ಗೋಯಲ್

ಮುಂದಿನ ಸುದ್ದಿ
Show comments