ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ನದಿ ಗ್ರಾಮದ ಲಕ್ಷ್ಮಣತೀರ್ಥದಲ್ಲಿ ಅಗ್ನಿಶಾಮಕ ದಳ,ಪೊಲೀಸ್,ಸೇವಾ ಭಾರತಿ ಮುಳುಗು ಪರಿಣಾಮವಾಗಿ ಟಿ. ಶೆಟ್ಟಿಗೇರಿ ನಿವಾಸಿ ಚೆಟ್ಟಂ ಎ. ಅವರ ಪತ್ನಿ ರೇವತಿ ರೇಖಾ (ತಾಮನೆ ಕನ್ನಿಕಂಡ ಸೂರ್ಲಬ್ಬಿ) ಅವರ ಮೃತದೇಹವನ್ನು ಹೊರತೆಗೆದಿದ್ದು,ಮಗನ ಮೃತ ದೇಹಕ್ಕಾಗಿ ಶೋಧಕಾರ್ಯ ಪ್ರಕಾಶ್ ಮುಂದುವರೆದಿದ್ದಾರೆ.
ಶನಿವಾರ ಹಸು ಮೇಯುತ್ತಿದ್ದ ತಾಯಿ ಮತ್ತು ಮಗ ನಾಪತ್ತೆಯಾದ ಹಿನ್ನಲೆಯಲ್ಲಿ ಲಕ್ಷ್ಮಣತೀರ್ಥ ನದಿಯ ದಡದ ಸಮೀಪ ಮಗ ಕಾರ್ಯಪ್ಪ(12) ಮತ್ತು ನದಿಯ ಕೆಸರಿನಲ್ಲಿ ತಾಯಿ ರೇವತಿ ರೇಖಾ (32) ಅವರ ಚಪ್ಪಲಿ ಕೆಸರಿನಲ್ಲಿ ಹೂತುಕೊಂಡಿದ್ದ ಶಂಕೆಯಿಂದ ನದಿಯಲ್ಲಿ ಶೋಧ ಕಾರ್ಯವನ್ನು ಶನಿವಾರ ಸಂಜೆ ನಡೆಸಲಾಯಿತು. ಜಾರಿ ತಾಯಿಯ ಕಣ್ಣೆದುರೇ ಮುಳುಗುತ್ತಿದ್ದುದನ್ನು ಕಂಡು ಮಗನ ರಕ್ಷಣೆಗೆ ಧಾವಿಸಿ,ತಾಯಿ ಸಹ ನೀರಿನಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ.ಸ್ಥಳದಲ್ಲಿ ತಾಯಿಯ ತಪ್ಪಲಿ ಕೆಸರಿನಲ್ಲಿ ಹೂತು ಹೋಗುವುದು,ಮತ್ತು ಮಗುವಿನ ಚಪ್ಪಲಿ ಸುಮಾರು 40 ಅಡಿ ದೂರದಲ್ಲಿ ಬಿಚ್ಚಿಟ್ಟಿರುವುದು ಕಂಡು ಬಂದಿದೆ.
ರಾತ್ರಿಯಾದ ಹಿನ್ನಲೆ ಶೋಧಕಾರ್ಯ ನಿಲ್ಲಿಸಿ, ಭಾನುವಾರ ಬೆಳ್ಳಿಗೆ ಶೋಧಕಾರ್ಯ ಮುಂದಿಟ್ಟ ಚಪ್ಪಲಿ ದೊರೆತ ಸ್ಥಳದಲ್ಲಿ ಸುಮಾರು 100 ಅಡಿ ದೂರದಲ್ಲಿ ತಾಯಿಯ ಮೃತದೇಹ ಪತ್ತೆಯಾಗಿದೆ. ಮಗನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.ಮರಳು ಗಣಿಗಾರಿಕೆಯಿಂದ ನದಿಯಲ್ಲಿ ದೊಡ್ಡ ಮಟ್ಟದ ಗುಂಡಿಗಳು ಬಿದ್ದಿದ್ದು,ಸುಮಾರು 15-20 ಅಡಿ ಆಳ ನೀರು ನದಿಯಲ್ಲಿದೆ.
ರೇವತಿ ರೇಖಾ ಅವರು ಟಿ. ಶೆಟ್ಟಿಗೇರಿ ನಿವಾಸಿ ಚೆಟ್ಟಂಗಡ ಎ. ಪ್ರಕಾಶ್ ಅವರ ಪತ್ನಿಯಾಗಿದ್ದಾಳೆ.ಮಗ ಶ್ರೀಮಂಗಲ ಜೆ.ಸಿ.ವಿದ್ಯಾಸಂಸ್ಥೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ಪ್ರತಿಭಾವಂತ ಪುತ್ರನಾಗಿದ್ದ ಕಾರ್ಯಪ್ಪ,ಮತ್ತು ಪತ್ನಿಯ ಅಗಳಿಕೆಯಿಂದ ತೀವ್ರಗೊಂಡಿರುವ ಸಣ್ಣ ರೈತರಾಗಿರುವ ಪ್ರಕಾಶ್ ಅವರು ಶ್ರೀಮಂಗಲ ವರ್ತಕರ ಸಹಕಾರ ಸಂಘದ ಬ್ಯಾಂಕ್ ನಲ್ಲಿ ಪಿಗ್ಮಿ ಸಂಗ್ರಹಕಾರರಾಗಿದ್ದರು.
ತಾಯಿ,ಮಗ ನದಿಯಲ್ಲಿ ಮುಳುಗಿರುವ ಸುದ್ದಿ ಕೇಳಿ ಗ್ರಾಮಸ್ಥರು, ಬಂಧುಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಶೋಧ ಕಾರ್ಯಕ್ಕೆ ಸಹಕಾರಿ.
ಕಿರಿಯ ಮಗುವಿನ ಶಿಕ್ಷಣ ಹೊಣೆ ಹೊತ್ತ ಶ್ರೀಮಂಗಲ ಜೆ.ಸಿ.ಶಾಲೆ:
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ತಾಯಿ,ಅಣ್ಣನನ್ನು ಕಳೆದುಕೊಂಡಿರುವ ಪ್ರಕಾಶ್ ಅವರ ಮತ್ತೋರ್ವ ಮಗ ಪವನ್ ಪೊನ್ನಣ್ಣ(6) ಒಂದನೇ ತರಗತಿ ಓದುತ್ತಿದ್ದರು, ಇವರ 8ನೇ ತರಗತಿಯವರೆಗೆ ತಮ್ಮ ಜೆ.ಸಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಶ್ರೀಮಂಗಲ ಜೆ.ಸಿ.ಶಾಲೆಯ ಕೊಟ್ರಂಗಡ ತಿಮ್ಮಯ್ಯ ಈ ಸಂದರ್ಭ ಪ್ರಕಾಶ್ ಅವರಿಗೆ ಭರವಸೆ ನೀಡಿದ್ದಾರೆ.
ಕಳೆದ ವಾರವಷ್ಟೇ ನಡೆದ ಕಾರ್ಯಕ್ರಮದಲ್ಲಿ 12 ವರ್ಷದ ಕಾರ್ಯಪ್ಪ ತಾವೇ ಸ್ವರಚಿತ ಹಾಡು ಬರೆದು ಹಾಡಿ,ಜನ ಮೆಚ್ಚಿಗೆ ಗಳಿಸಿ ಬಹುಮಾನ ಪಡೆದಿದ್ದು,ಕುಟುಂಬವರ್ಗ ನೆನೆದು ಕಣ್ಣೀರಿಟ್ಟರು.ಪತ್ನಿ ಮತ್ತು ಮಗನನ್ನು ಕಳೆದು ಕೊಂಡ ಪ್ರಕಾಶ್ ಅವರು ತಮ್ಮ ಸರ್ವಸ್ವವನ್ನು ಕಳೆದುಕೊಂಡಿದ್ದಾರೆ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಎಲ್ಲರನ್ನೂ ಹಿಂಡುವಂತಿತ್ತು.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.