ಮಲಗಿದ್ದಲ್ಲೇ ಪ್ರಾಣಬಿಟ್ಟ ತಾಯಿ..ಮೃತದೇಹದ ಜೊತೆ ಎರಡು ದಿನ ಕಳೆದ ಮಗ

Webdunia
ಗುರುವಾರ, 2 ಮಾರ್ಚ್ 2023 (18:48 IST)
ತಾಯಿ ಮೃತಪಟ್ಟಿದ್ಳು.ಮಗನಿಗೆ ಅಮ್ಮನನ್ನ ಬಿಟ್ಟು ಬರೊ ಮನಸ್ಸಿರಲಿಲ್ಲ.ಅಕ್ಕಪಕ್ಕದವ್ರಿಗೂ ವಿಚಾರ ಹೇಳಿಲ್ಲ.ಹೀಗೆ ಅಮ್ಮನ ಮೃತದೇಹದ ಜೊತೆಗೆ ಎರಡು ದಿನ‌ ಕಳೆದಿದ್ದ.ಇಂತಹದೊಂದು ಹೃದಯ ವಿದ್ರಾವಕ ಘಟನೆಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಅಣ್ಣಮ್ಮ.ಈ ದಂಪತಿ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರೊ ಗಂಗಾನಗರ ಐದನೇ ಕ್ರಾಸ್ ನಲ್ಲಿ ವಾಸವಿದ್ರು.ಸಣ್ಣದೊಂದು ಸ್ವಂತ ಸೀಟಿನ ಮನೆ.ದಂಪತಿಗೆ 14 ವರ್ಷದ ಒಂದು ಗಂಡು ಮಗು.ಸುಖ ಸಂಸಾರಕ್ಕೆ ಇದಕ್ಕಿಂತ ಹೆಚ್ಚೇನು ಬೇಕಾಗಿರಲಿಲ್ಲ ಬಿಡಿ.ಆದರೆ ಅನಾರೋಗ್ಯ ಅನ್ನೋದು ಇಡೀ ಕುಟುಂಬವನ್ನೇ ಕಾಡಿತು.ಅಷ್ಟೇ ಅಲ್ಲ ಹೃದಯ ವಿದ್ರಾವಕ ಘಟನೆಗೂ ಸಾಕ್ಷಿಯಾಗಿದೆ.

ಎಂತಹವರೂ ನೋಡಿ ಅಸೂಹೆ ಪಡುವಂತಿದ್ದ ಈ ಸಂಸಾರಕ್ಕೆ ಅನಾರೋಗ್ಯ ಅನ್ನೋದು ಶಾಪವಾಗಿ ಕಾಡಿದೆ..ಹೌದು ಎಂಟು ತಿಂಗಳ ಹಿಂದಷ್ಟೇ ಪತಿ ಎಳಂಗೋವನ್ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದ.ಅಂದಿನಿಂದ ತಾಯಿ ಮತ್ತು 14 ವರ್ಷದ ಮಗ ಇಬ್ಬರೇ ಮನೆಯಲ್ಲಿದ್ರು.ತಾಯಿಗೆ ಸ್ಟ್ರೋಕ್ ಆಗಿ ಮಾತು ಕೂಡ ಬಂದ್ ಆಗಿತ್ತು.ತಂದೆಯ ಸ್ನೇಹಿತರ ನೆರವಿನೊಂದಿಗೆ ಅಮ್ಮ..ಮಗ ಬದುಕು ಕಟ್ಟಿಕೊಂಡಿದ್ರು.14 ವರ್ಷದ ಮಗನೇ ಅಡುಗೆ ಮಾಡಿ ಹಾಕ್ತಿದ್ದ.ಅಲ್ಲದೇ ಹೆಚ್ಚಾಗಿ ಮನೆಯಿಂದ ಹೊರಗೂ ಬರ್ತಾ ಇರಲಿಲ್ಲ.

ಹೀಗಿರ್ಬೇಕಾದ್ರೆ ಫೆಬ್ರವರಿ 26 ರಂದು ರಾತ್ರಿ ಮಲಗಿದ್ದಲ್ಲಿಯೇ ತಾಯಿ ಅಣ್ಣಮ್ಮ ಮೃತಪಟ್ಟಿದ್ದಾಳೆ.ವಿಚಾರ ಮಗನಿಗೆ ಗೊತ್ತಾಗಿತ್ತೊ ಇಲ್ವೋ ಗೊತ್ತಿಲ್ಲ.ಆದರೆ ತಾಯಿ ಜೊತೆಗೆನೇ ಕಾಲ‌ ಕಳೆದಿದ್ದಾನೆ.ಮನೆಯಿಂದ ಹೊರಗೆ ಬರ್ತಿದ್ದ ಆತ ಊಟ ತಿಂಡಿ ತೆಗೆದುಕೊಂಡು ಮತ್ತೆ ಮೆ ಸೇರ್ಕೊತಿದ್ದ‌.ತಾಯಿ ಪಕ್ಕದಲ್ಲೇ ಮಲಗಿಕೊಂಡಿದ್ದ.ಹೀಗಿರ್ಬೇಕಾದ್ರೆ ಫೆಬ್ರವರಿ 28 ರಂದು ಸ್ವತಃ ಮಗನೇ ತನ್ನ ತಂದೆಯ ಸ್ನೇಹಿತರಿಗೆ ತಾಯಿ ಮಾತಾಡ್ತಿಲ್ಲ ಅಂತಾ ಹೇಳಿದ್ದಾನೆ.ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.ಘಟನೆಯಿಂದ ಏರಿಯಾ ಜನರೆಲ್ಲ ಶಾಕ್ ಆಗಿದ್ದಾರೆ.ಏನೇ ಹೇಳಿ ತಾಯಿಯ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಸತ್ತಿದ್ದಾಳೆ ಅನ್ನೋ ಸಂಗತಿಯೇ ಗೊತ್ತಾಗಿಲ್ವೋ ಏನೊ.ಎರಡು ದಿನ ಮೃತದೇಹದ ಜೊತೆಗೆ ಕಳೆದಿದ್ದು ನಿಜಕ್ಕೂ ಮನಕಲಕುವಂತಿದೆ
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಕಾರ್ಜುನ ಖರ್ಗೆ ಪುತ್ರನ ನಂತರ ಈಗ ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಪುತ್ರನ ಹವಾ

ಬಿಜೆಪಿಯವರ ಭ್ರಷ್ಟಾಚಾರ ಕತೆ ಹೇಳಲು ಮೂರು ರಾತ್ರಿ ಸಾಲದು: ಪ್ರಿಯಾಂಕ್ ಖರ್ಗೆ

Karnataka Weather: ರಾಜ್ಯದಲ್ಲಿ ಇಂದೂ ಕೆಲವು ಜಿಲ್ಲೆಗಳಿಗೆ ಮಳೆಯ ಅಬ್ಬರ

ನಮ್ಮಪ್ಪನ ನಂತ್ರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕ: ಡಿಕೆಶಿ ಕನಸಿಗೆ ಕೊಳ್ಳಿಯಿಟ್ಟ ಯತೀಂದ್ರ ಸಿದ್ದರಾಮಯ್ಯ

ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ ಮುಂದೆ ಡ್ಯಾನ್ಸ್ ಮಾಡೋದು ಯಾಕೆ: ಬಿಕೆ ಹರಿಪ್ರಸಾದ್ ವಿವಾದ

ಮುಂದಿನ ಸುದ್ದಿ
Show comments