Webdunia - Bharat's app for daily news and videos

Install App

ಹಿಜಾಬ್​ ಧರಿಸಿಲ್ಲವೆಂದು ಮೊಸರೆರಚಿ ಹಲ್ಲೆ

Webdunia
ಬುಧವಾರ, 5 ಏಪ್ರಿಲ್ 2023 (16:50 IST)
ಇರಾನ್​ನ ಈಶಾನ್ಯ ಭಾಗದಲ್ಲಿರುವ ಮಶಾದ್ ನಗರದ ಬಳಿ ಇರುವ ಪಟ್ಟಣದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಹಿಜಾಬ್ ಧರಿಸದ ಇಬ್ಬರು ಮಹಿಳೆಯರಿಗೆ ಮೊಸರು ಎರಚಿರುವ ವಿಡಿಯೋ ವೈರಲ್ ಆಗಿದೆ. ಇದಾದ ಮೇಲೆ ಹಿಜಾಬ್ ಕಾನೂನಿನ ಪರವಾಗಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿಕೆ ನೀಡಿದ್ದಾರೆ. ರಾಜ್ಯ ಟೆಲಿವಿಷನ್​ನಲ್ಲಿ ಲೈವ್​​ನಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಕೆಲವರು ಹಿಜಾಬ್​​ ಅನ್ನು ನಂಬುವುದಿಲ್ಲ ಎಂದು ಹೇಳಿದರೆ ಅವರ ಮನವೊಲಿಸುವುದು ಒಳ್ಳೆಯದು. ಹಿಜಾಬ್ ಇಂದು ಒಂದು ಕಾನೂನು ವಿಷಯ ಎಂದು ಹೇಳಿದ್ದಾರೆ. ಇರಾನ್​ನ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋ ತುಣುಕಿನಲ್ಲಿ ಅಂಗಡಿಯಲ್ಲಿ ಹಿಜಾಬ್ ಧರಿಸದ ಇಬ್ಬರು ಮಹಿಳಾ ಗ್ರಾಹಕರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಮಹಿಳೆಯರ ಮೇಲೆ ದಾಳಿ ಮಾಡಿದ ಪುರುಷನು ಆ ಮಹಿಳೆಯರ ತಲೆಯ ಮೇಲೆ ಮೊಸರನ್ನು ಸುರಿಯುತ್ತಾನೆ. ಇಬ್ಬರು ಮಹಿಳೆಯರ ತಲೆಯ ಮೇಲೆ ಮೊಸರು ಸುರಿದ ವ್ಯಕ್ತಿಗೆ ಇರಾನ್ ಅಧಿಕಾರಿಗಳು ಬಂಧನ ವಾರಂಟ್​​ ಹೊರಡಿಸಿದ್ದು, ಕಟ್ಟು ನಿಟ್ಟಾದ ಸ್ತ್ರೀ ಉಡುಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆ ಮಹಿಳೆಯರ ವಿರುದ್ಧವೂ ವಾರಂಟ್​ನ್ನ ಹೊರಡಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ