Select Your Language

Notifications

webdunia
webdunia
webdunia
webdunia

ಶಾರ್ಟ್ ಸರ್ಕ್ಯೂಟ್‌: 120ಕ್ಕೂ ಹೆಚ್ಚು ಬೈಕ್ ಕರಕಲು

ಶಾರ್ಟ್ ಸರ್ಕ್ಯೂಟ್‌: 120ಕ್ಕೂ ಹೆಚ್ಚು ಬೈಕ್ ಕರಕಲು
ಬೀದರ್ , ಶುಕ್ರವಾರ, 4 ನವೆಂಬರ್ 2016 (17:16 IST)
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಜಾಜ್ ಶೋ ರೂಮ್ ಹೊತ್ತಿ ಉರಿದು 120ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾದ ಘಟನೆ ಬೀದರ್‌ನಲ್ಲಿ ನಡೆದಿದೆ. 
ಜಿಲ್ಲೆಯ ಮನ್ನಳ್ಳಿ ಮುಖ್ಯರಸ್ತೆಯಲ್ಲಿರುವ ಜೈ ಭವಾನಿ ಬಜಾಜ್ ಶೋರೂಮ್‌ನಲ್ಲಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಅಗ್ನಿ ಅನಾಹುತ ಸಂಭವಿಸಿದ್ದು 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ದಹಿಸಿಹೋಗಿವೆ ಎಂದು ಹೇಳಲಾಗುತ್ತಿದೆ. 
 
ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.
 
ನರೇಂದ್ರ ಗೌಡಶೆಟ್ಟಿ ಎಂಬುವವರಿಗೆ ಸೇರಿದ ಈ ಶೋ ರೂಮ್‌ನಲ್ಲಿ ಪಲ್ಸರ್, ಅವೆಂಜರ್, ಪ್ಲಾಟಿನಾ ಸೇರಿದಂತೆ ದುಬಾರಿ ಬೆಲೆಯ ಬೈಕ್‌ಗಳು ಸುಟ್ಟು ಹೋಗಿವೆ. ಈ ವಾಹನಗಳಿಗೆ ಜೀವವಿಮೆ ಕೂಡ ಇರಲಿಲ್ಲ ಎಂದು ಶೋ ರೂಮ್ ಮಾಲೀಕ ನರೇಂದ್ರ ಹೇಳುತ್ತಿದ್ದಾರೆ.
 
ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಕಿಶನ್ ಗ್ರೇವಾಲ್ ಹುತಾತ್ಮನಲ್ಲ: ಹರಿಯಾಣ ಸಿಎಂ