ನಗರದ ಪ್ರೆಸ್ ಕ್ಲಬ್ ನಲ್ಲಿ ಹೆಲ್ಪಿಂಗ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಮತ್ತು ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಸುದ್ದಿಗೋಷ್ಟಿ ನಡೆಸಿದ್ದಾರೆ.ಡಿಜೆ ಹಳ್ಳಿ – ಕೆಜೆ ಹಳ್ಳಿ , ಶಿವಮೊಗ್ಗ ಗಲಭೆ ಪ್ರಕರಣ ಸಂಬಂಧ ಸುದ್ದಿಗೋಷ್ಟಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಆಲಂ ಪಾಷ ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಗಲಬೆ ಸಂಬಂಧ
550 ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಅಮಾಯಕರನ್ನು ಅರೆಸ್ಟ್ ಮಾಡಲಾಗಿದೆ .ಅವರನ್ನ ಬಿಡುಗಡೆ ಮಾಡಬೇಕು.ಗಲಭೆಯಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಆದರೆ ಯಾವುದೇ ಸಾಕ್ಷಿಗಳಿಲ್ಲದೇ ಮುಗ್ದರನ್ನ ಅರೆಸ್ಟ್ ಮಾಡಿದ್ದಾರೆ.ಘಟನೆ ಸಂಬಂಧ ತಪಾಸಣೆ ಮಾಡಿಲ್ಲ. ಸ್ಥಳದ ಮಹಜರು ನಡೆಸಿಲ್ಲ.ಯಾರೋ ಹೇಳಿದ್ದನ್ನ ಕೇಳಿ ಅಮಾಯಕರನ್ನ ಜೈಲಿಗೆ ಹಾಕಿದ್ದಾರೆ .ಮೂರು ವರ್ಷಗಳಿಂದ ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಅವರನ್ನ ಬಿಡುಗಡೆ ಮಾಡಲಿ.800 ರಿಂದ 1000 ಜನರು ಘಟನೆಯಲ್ಲಿ ಭಾಗಿಯಾಗಿದ್ದಾರೆ .ರಾಜಕೀಯ ಪಕ್ಷಗಳು ಭಾಗಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ . 480 ಜನರು ಅರೆಸ್ಟ್ ಆಗಿದ್ದು 475 ಜನ ಮುಗ್ಧರಿದ್ದಾರೆ .ಹೀಗಾಗಿ ಅಮಾಯಕರನ್ನ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಹೇಳಿದ್ದಾರೆ.