Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿ

ರಾಜ್ಯದಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿ
bangalore , ಮಂಗಳವಾರ, 26 ಅಕ್ಟೋಬರ್ 2021 (20:34 IST)
ರಾಜ್ಯದಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಅಕ್ಟೋಬರ್ 2021 ರಿಂದ ಮಾರ್ಚ್ 2022 ರವರೆಗೆ ಡಿಎಪಿ, ಎಂ.ಒ.ಪಿ, ಕಾಂಪ್ಲೆಕ್ಸ್, ಯೂರಿಯಾ ಗೊಬ್ಬರಗಳಿಗೆ 16 ಲಕ್ಷದ 94 ಸಾವಿರ ಮೆಟ್ರಿಕ್ ಟನ್ ಬೇಡಿಕೆಯಿದ್ದು, ಅಕ್ಟೋಬರ್ 2021 ರ ಅಂತ್ಯದವರೆಗೆ 2,80,456 ಮೆಟ್ರಿಕ್ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರಗಳಿಗೆ ಬೇಡಿಕೆಯಿದ್ದು, ಆರಂಭಿಕ ಶುಲ್ಕ ಸೆಪ್ಟೆಂಬರ್ 2021 ರ ಅಂತ್ಯದವರೆಗೆ 7,0 8850 ಮೆಟ್ರಿಕ್ ಟನ್  ಒಳಗೊಂಡಂತೆ ಅಕ್ಟೋಬರ್ 2,30,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ ಗಳ ರಸಗೊಬ್ಬರ ಸರಬರಾಜಾಗಿದ್ದು,  ಒಟ್ಟು ರಾಜ್ಯದಲ್ಲಿ ಅಕ್ಟೋಬರ್ ಗೆ  9,39,000 ಮೆಟ್ರಿಕ್ ಟನ್ ಲಭ್ಯವಿರುತ್ತದೆ.  26-10-2021ರವರೆಗೆ 3,33,000 ಮೆಟ್ರಿಕ್ ಮಾರಾಟವಾಗಿದೆ. ಉಳಿದ 6,05,760 ಮೆಟ್ರಿಕ್ ಟನ್ ರಸಗೊಬ್ಬರ (ಡಿಎಪಿ 33,570 ಮೆಟ್ರಿಕ್ ಟನ್, ಎಂಒಪಿ 28,420 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 3,16,140 ಮೆಟ್ರಿಕ್ ಟನ್ ಹಾಗೂ ಯೂರಿಯಾ 2,27,630 ಮೆಟ್ರಿಕ್ ಟನ್) ದಾಸ್ತಾನು ಇದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮುಂಗಾರು  ಹಂಗಾಮಿನಲ್ಲಿ 26,47,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ ನ ರಸಗೊಬ್ಬರಕ್ಕೆ ಬೇಡಿಕೆಯಿರುವುದನ್ನು ಯಾವುದೇ ಕೊರತೆಯಿಲ್ಲದೇ ಪೂರೈಸಲಾಗಿದೆ. ಆರಂಭಿಕ ಶುಲ್ಕ(11,54,320 ಮೆ.ಟ)ಹಾಗೂ 24 ಲಕ್ಷ ಮೆಟ್ರಿಕ್ ಟನ್ ಸರಬರಾಜು ಒಳಗೊಂಡಂತೆ ಒಟ್ಟು 35,63,000 ಮೆ.ಟನ್ ವಿವಿಧ ರಸಗೊಬ್ಬರ ಮುಂಗಾರಿನಲ್ಲಿ ಪೂರೈಸಲಾಗಿದೆ. ಮುಂಗಾರಿನಲ್ಲಿ 28,54,000 ಮೆಟ್ರಿಕ್ ಟನ್ ವಿವಿಧ ಗ್ರೇಡ್ ನ ರಸಗೊಬ್ಬರ ಮಾರಾಟವಾಗಿದ್ದು,ಪೂರೈಕೆಯ ಬಳಿಕವೂ ಸೆಪ್ಟೆಂಬರ್ 2021 ಅಂತ್ಯಕ್ಕೆ ಸೆಪ್ಟೆಂಬರ್ 2021 ರ ಅಂತ್ಯದವರೆಗೆ 7,0 8850 ಮೆಟ್ರಿಕ್ ಟನ್ ದಾಸ್ತಾನು ಇರುತ್ತದೆ. ಈ ದಾಸ್ತಾನನ್ನು ಹಿಂಗಾರಿಗೂ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷ ಕಂಠಗಳಲ್ಲಿ ಮೊಳಗಲಿದೆ ಕನ್ನಡ ಗೀತೆಯ ಗಾಯನ