Select Your Language

Notifications

webdunia
webdunia
webdunia
webdunia

ಗೋಬಿ, ಫ್ರೈಡ್ ರೈಸ್, ಕಬಾಬ್`ಗಳನ್ನ ಚಪ್ಪರಿಸಿ ತಿನ್ನುವ ಮೊದಲು ಈ ಸುದ್ದಿ ನೋಡಿ.

ಗೋಬಿ, ಫ್ರೈಡ್ ರೈಸ್, ಕಬಾಬ್`ಗಳನ್ನ ಚಪ್ಪರಿಸಿ ತಿನ್ನುವ ಮೊದಲು ಈ ಸುದ್ದಿ ನೋಡಿ.
ಬೆಂಗಳೂರು , ಮಂಗಳವಾರ, 21 ಮಾರ್ಚ್ 2017 (09:20 IST)
ಅಬ್ಬಬ್ಬಾ.. ಏನ್ ರುಚಿ.. ಇದಕ್ಕೆ ಏನ್ ಹಾಕಿ ಮಾಡುತ್ತಾರೋ ಎಂದು ಚಪ್ಪರಿಸಿಕೊಂಡು ಗೋಬಿ, ಫ್ರೈಡ್ ರೈಸ್, ಕಬಾಬ್, ಚಿಲ್ಲಿ ಚಿಕನ್, ನೂಡಲ್ಸ್`ಗಳನ್ನ ತಿಂದಿರುತ್ತೀರಿ. ಆದರೆ, ಈ ರುಚಿಯ ಹಿಂದೆ ಹಲವೆಡೆ ಮೋನೋಸೋಡಿಯಂ ಗ್ಲುಟಮೇಟ್`ನ ಪ್ರಭಾವವಿರುತ್ತೆ. ಫುಟ್ಬಾತ್`ಗಳಲ್ಲಿ ಮಾಡುವ ಬಹುತೇಕ ತಿಂಡಿಗಳಿಗೆ ಇದನ್ನ ರುಚಿ ವರ್ಧಕವಾಗಿ ಬಳಕೆ ಮಾಡುತ್ತಾರೆ. ಎನ್ನಲಾಗುತ್ತಿದೆ. ಇದನ್ನ ಮಿತಿ ಮೀರಿ ಬಳಸಿದರೆ ಆರೋಗ್ಯಕ್ಕೆ ಹಾನಿಕರ. ಈ ವಿಷಯವನ್ನ ಸ್ವತಃ ಆರೋಗ್ಯ ಸಚಿವರೇ ವಿಧಾನಪರಿಷತ್`ನಲ್ಲಿ ಹೇಳಿದ್ದಾರೆ.

ಪರಿಷತ್`ನಲ್ಲಿ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಮೋನೋಸೋಡಿಯಂ ಬಳಕೆ ಅಪರಾಧವಾದರೂ ಈ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗದಿರುವ ಬಗ್ಗೆ ಸರ್ಕಾರದ ವೈಫಲ್ಯ ಎಂದು ಒಪ್ಪಿಕೊಂಡಿದ್ದಾರೆ..

ಇದನ್ನ ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ತಲೆನೋವು, ಹೊಟ್ಟೆತೊಳೆಸುವುದು, ಎದೆನೋವು ಈ ರೀತಿ ಸಮಸ್ಯೆಗಳು ಬಾಧಿಸುತ್ತವೆ ಎಂದು ರಮೇಶ್ ಕುಮಾರ್ ಹೇಳಿದರು. ಹೀಗಾಗಿ, ಈ ಮಾರಣಾಂತಿಕ ಉತ್ಪನ್ನದ ನಿಷೇಧಕ್ಕೆ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.

ಆರೋಗ್ಯಕ್ಕೆ ಹಾನಿಕರ: ಮೋನೋಸೋಡಿಯಂ ಗ್ಲುಟಮೆಟ್ ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಕರ. ಮಕ್ಕಳ ಮೆದುಳಿನ ಮೇಲೂ ಇದು ಪರಿಣಾಮ ಬೀರುತ್ತೆ ಎನ್ನುವುದನ್ನ ಹಲವು ವರದಿಗಳು ಧೃಡಪಡಿಸಿವೆ. ಈ ಹಿಂದೆ ಮೋನೋಸೋಡಿಯಂ ಇದೆ ಎಂಬ ಕಾರಣಕ್ಕೆ ಮ್ಯಾಗಿ ನಿಷೇಧ ಮಾಡಿದ್ದನ್ನ ನಾವಿಲ್ಲಿ ಸ್ಮರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕೃತ ಬಂಗಲೆಗೆ ಪ್ರವೇಶ ಮಾಡಲು ಸಿಎಂ ಯೋಗಿ ತಡಮಾಡಿದ್ದೇಕೆ?!