ಚಾಮರಾಜನಗರ : ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ ಮೋಹನ್ ಎಂಬಾತನ ಬಳಿ ಸುಮಾರು 25.76 ಲಕ್ಷ ರೂ. ಜಪ್ತಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಈ ಪ್ರಕರಣದ ಬಗ್ಗೆ ಯಾವುದೇ ತನಿಖೆಗೂ ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು,’ ಹಣದ ಸಮೇತ ಸಿಕ್ಕಿ ಬಿದ್ದರುವ ಮೋಹನ ಎಂಬಾತ ನನ್ನ ಪಿಎ ಅಲ್ಲ. ಆತ ಟೈಪಿಸ್ಟ್, ಆತನ ಮುಖವನ್ನು ನಾನು ನೋಡಿಲ್ಲ. ನನಗೆ ಈ ಹಿಂದೆ ಮಂಜುನಾಥ ಹಾಗೂ ಕೃಷ್ಣಪ್ಪ ಎಂಬ ಪಿಎಗಳಿದ್ದರು. ಮಂಜುನಾಥ್ ಎಂಬಾತ ನನ್ನ ಸಹಿಯನ್ನೇ ಫೋರ್ಜರಿ ಮಾಡಿದ್ದ. ಕೃಷ್ಣಪ್ಪನ ಮೇಲೂ ನನಗೆ ಅನುಮಾನವಿತ್ತು ಇವರಿಬ್ಬರನ್ನು ಬೆಳಗಾವಿ ಅಧಿವೇಶನದ ಬಳಿಕ ಕೆಲಸದಿಂದ ತೆಗೆದುಹಾಕಿದ್ದೆ. ಶುಕ್ರವಾರ ನನ್ನ ಕಚೇರಿಗೆ ಕೃಷ್ಣಪ್ಪ ಬಂದಿದ್ದ ಎಂಬ ಮಾಹಿತಿ ಇದೆ. ಹಾಗಾಗಿ ಇವರಿಬ್ಬರ ಮೇಲೆ ನನಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ಸಿದ್ಧನಾಗಿದ್ದೇನೆ. ನನ್ನನ್ನು ಸಿಲುಕಿಸಲು ಪಿತೂರಿ ನಡೆದಿದೆ. ವಿಧಾನಸೌಧದಲ್ಲಿ ಅತ್ಯಂತ ಬಿಗಿ ಪೊಲೀಸ್ ಭದ್ರತೆಯಿದೆ. ಸಿಸಿಟಿವಿ ಇದೆ. ಹೀಗಿದ್ದರೂ ವಿಧಾನಸೌಧದ ಒಳಗಡೆ ಹಣ ಹೋಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.