Select Your Language

Notifications

webdunia
webdunia
webdunia
webdunia

ಹಣ ಹಂಚಿದರಾ ಕಾಂಗ್ರೆಸ್ ಮುಖಂಡೆ ಲಕ್ಷ್ಮೀ ಹೆಬ್ಬಾಳ್ಕರ್..?

ಹಣ ಹಂಚಿದರಾ ಕಾಂಗ್ರೆಸ್ ಮುಖಂಡೆ ಲಕ್ಷ್ಮೀ ಹೆಬ್ಬಾಳ್ಕರ್..?
ಗುಂಡ್ಲುಪೇಟೆ , ಗುರುವಾರ, 6 ಏಪ್ರಿಲ್ 2017 (16:19 IST)
ಉಪಚುನಾವಣಾ ಕಣದಲ್ಲಿ ಕುರುಡು ಕಾಂಚಾಣದ ಹವಾ ಶುರುವಾಗಿದೆ. ಗುಂಡ್ಲುಪೇಟೆಯ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಹಣ ಹಂಚಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದು, ವಿಡಿಯೋ ಸಿಡಿ ಬಿಡುಗಡೆ ಮಾಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ವಿಡಿಯೋದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಣ ಹಿಡಿದು ಕುಳಿತಿರುವ ದೃಶ್ಯಾವಳಿಗಳು ಇವೆ. ಈ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್, ಕಾರ್ಯಕರ್ತರಿಗೆ ಊಟದ ಖರ್ಚಿಗೆ ಹಣ ನೀಡುತ್ತಿದ್ದೆವು, ವೋಟಿಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿಶೆಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನ ಕೂಡಲೆ ಬಂಧಿಸಬೇಕು. ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಬಾಡಿಗೆ ರಸೀದಿ: ತೆರಿಗೆ ವಂಚಕರಿಗೆ ಆದಾಯ ತೆರಿಗೆ ಇಲಾಖೆ ಶಾಕ್