Select Your Language

Notifications

webdunia
webdunia
webdunia
webdunia

ಮೊಹಮ್ಮದ್ ನಲಪಾಡ್ ಪ್ರಕರಣದಿಂದ ದೊಡ್ಡವರ ಮಕ್ಕಳಿಗೆ ಸಿಕ್ಕಿತು ದೊಡ್ಡ ಪಾಠ!

ಮೊಹಮ್ಮದ್ ನಲಪಾಡ್ ಪ್ರಕರಣದಿಂದ ದೊಡ್ಡವರ ಮಕ್ಕಳಿಗೆ ಸಿಕ್ಕಿತು ದೊಡ್ಡ ಪಾಠ!
ಬೆಂಗಳೂರು , ಗುರುವಾರ, 15 ಮಾರ್ಚ್ 2018 (09:03 IST)
ಬೆಂಗಳೂರು: ನಮ್ಮ ದೇಶದಲ್ಲಿ ದೊಡ್ಡವರ ಮಕ್ಕಳು ತಪ್ಪು ಮಾಡಿದರೂ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ ಎಂಬ ಅಪವಾದಕ್ಕೆ ಮೊಹಮ್ಮದ್ ನಲಪಾಡ್ ಪ್ರಕರಣ ದೊಡ್ಡ ಪಾಠ ಕಲಿಸಿದೆ.
 

ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಮತ್ತು ಗ್ಯಾಂಗ್ ಈಗಾಗಲೇ 22 ದಿನ ನ್ಯಾಯಾಂಗ ಬಂಧನದಲ್ಲಿ ಕಳೆದಿದೆ. ಈಗಾಗಲೇ ಸೆಷನ್ಸ್ ಕೋರ್ಟ್ ನಲ್ಲಿ ಎರಡು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹೈಕೋರ್ಟ್ ನಲ್ಲೂ ಎರಡನೇ ಬಾರಿಗೆ ತೀರ್ಪು ಪ್ರಕಟವಾಗಿದೆ.

ಹೇಗೂ ಪ್ರಕರಣವೂ ಜನರ ಮನಸ್ಸಿನಿಂದ ನಿಧಾನವಾಗಿ ಕರಗುತ್ತಿದೆ. ಅತ್ತ ವಿದ್ವತ್ ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ. ಜತೆಗೆ ರಾಜಕೀಯ ಪ್ರಭಾವವೂ ಇದೆ. ಹೀಗಾಗಿ ನಲಪಾಡ್ ಬಿಡುಗಡೆಯಾಗಬಹುದು ಎಂಬ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದ ನ್ಯಾಯಾಲಯ ತಪ್ಪು ಮಾಡಿದವರು ಎಷ್ಟೇ ದೊಡ್ಡವರಾದರೂ ಪ್ರತಿಫಲ ಅನುಭವಿಸಲೇಬೇಕು ಎಂದು ಸಂದೇಶ ನೀಡಿದೆ. ಇಂತಹ ಘಟನೆಗಳಿಂದ ಜನರಿಗೆ ಮತ್ತಷ್ಟು ನ್ಯಾಯ ದೇವತೆಯ ಮೇಲೆ ನಂಬಿಕೆ ಮೂಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿ ರೀತಿ ಸುಳ್ಳು ಹೇಳುವ ಪ್ರಧಾನ ಮಂತ್ರಿಯನ್ನು ನಾನು ನೋಡಿಯೇ ಇಲ್ಲ-ಸಿಎಂ ಸಿದ್ದರಾಮಯ್ಯ