Select Your Language

Notifications

webdunia
webdunia
webdunia
webdunia

ಮತ್ತೆ ನನ್ನದೇ ಮನ್ ಕಿ ಬಾತ್ ಎಂದ ಮೋದಿ

ಮತ್ತೆ ನನ್ನದೇ ಮನ್ ಕಿ ಬಾತ್ ಎಂದ ಮೋದಿ
ನವದೆಹಲಿ , ಭಾನುವಾರ, 24 ಫೆಬ್ರವರಿ 2019 (15:42 IST)
`ಮನ್ ಕಿ ಬಾತ್ಕಾರ್ಯಕ್ರಮಕ್ಕೆ ಎರಡು ತಿಂಗಳ ಕಾಲ ಬಿಡುವು ನೀಡುವೆ. ಎರಡು ತಿಂಗಳ ಬಳಿಕ ಮತ್ತೊಮ್ಮೆ ಪ್ರಧಾನಿಯಾಗಿ ಮತ್ತದೇ ನನ್ನದೇ ಮನ್ ಕಿ ಬಾತ್ ನಡೆಯಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.  

ಜನರ ಆರ್ಶೀವಾದದ ಬಲದಿಂದ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತೇನೆ ಎಂದ ಪ್ರಧಾನಮಂತ್ರಿ ನರೇಂದ್ರಮೋದಿ, ತಮ್ಮ ಪ್ರತಿ ತಿಂಗಳ ಆಕಾಶವಾಣಿ ಸರಣಿಯ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಅವರ 53ನೇ `ಮನ್ ಕಿ ಬಾತ್ಕಾರ್ಯಕ್ರಮದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಪ್ರತಿ ತಿಂಗಳ ಕೊನೆ ಭಾನುವಾರದಂದು ರಾಷ್ಟ್ರದ ಜನತೆಯೊಂದಿಗೆ ತಮ್ಮ ಜನಪ್ರಿಯ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದ ಪ್ರಧಾನಿ ನರೇಂದ್ರಮೋದಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಾರ್ಯಕ್ರಮ ಇರುವುದಿಲ್ಲ ಎಂದು ಹೇಳಿದ್ದಾರೆ.

ಆರೋಗ್ಯಕರ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಗಮನದಲ್ಲಿರಿಸಿಕೊಂಡು ತಮ್ಮ ತಿಂಗಳ ಜನಪ್ರಿಯ ಕಾರ್ಯಕ್ರಮವನ್ನು 2 ತಿಂಗಳ ಮಟ್ಟಿಗೆ ನಿಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ಆಡಿಯೋ ಎಸ್ಐಟಿ ತನಿಖೆ ಶೀಘ್ರ