Select Your Language

Notifications

webdunia
webdunia
webdunia
webdunia

72 ಗಂಟೆಗಳ ಕಾಲ ಹಳೆಯ ನೋಟು ಸ್ವೀಕಾರ ಅವಧಿ ಹೆಚ್ಚಿಸಿದ ಕೇಂದ್ರ ಸರಕಾರ

ಮೋದಿ ಸರಕಾರ
ನವದೆಹಲಿ , ಶುಕ್ರವಾರ, 11 ನವೆಂಬರ್ 2016 (20:18 IST)
500 ರೂ ಮತ್ತು 1000 ರೂ. ನೋಟುಗಳಿಗೆ ನಿಷೇಧ ಹೇರಿದ್ದ ಕೇಂದ್ರ ಸರಕಾರ ಇಂದು ಮಧ್ಯರಾತ್ರಿಯವರಿಗೆ ಹಣ ಚಲಾವಣೆಯ ಗಡುವು ನೀಡಿತ್ತು. ಆದರೆ, ಇದೀಗ ಇನ್ನು 3 ದಿನ ಹಳೆಯ ನೋಟುಗಳ ಸ್ವೀಕಾರ ಅವಧಿಯನ್ನು ಹೆಚ್ಚಳಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
 
ಇನ್ನು 72 ಗಂಟೆಗಳ ಕಾಲ ಈ ಹಿಂದೆ ತಿಳಿಸಿದ ಸ್ಥಳಗಳಲ್ಲಿ ಹಳೆಯ 500 ಮತ್ತು 1 ಸಾವಿರ ರೂ. ಚಲಾವಣೆ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
 
ಕೇಂದ್ರದ ನಿರ್ಧಾರದಿಂದ ಆಸ್ಪತ್ರೆ, ರೈಲ್ವೇ, ವಿಮಾನ ನಿಲ್ದಾಣ, ಬಸ್ ಪ್ರಯಾಣ, ಮೆಡಿಕಲ್ ಶಾಪ್, ಬಿಲ್ ಪಾವತಿ ಮಾಡುವ ಸ್ಥಳ, ಪೆಟ್ರೋಲ್ ಬಂಕ್‍ಗಳಲ್ಲಿ ಹಳೆಯ ನೋಟುಗಳನ್ನು ಜನರು ನೀಡಬಹುದು.
 
ಇದೇ ರೀತಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನವೆಂಬರ್ 14ರವರೆಗೆ ಟೋಲ್ ನೀಡದೇ ವಾಹನಗಳ ಮಾಲೀಕರು ಮುಕ್ತವಾಗಿ ಸಂಚರಿಸಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
 
ಹಳೆಯ 500, 1 ಸಾವಿರ ರೂ. ನೋಟ್ ನಿಷೇಧವಾದ ಬಳಿಕ ಕೇಂದ್ರ ಸರ್ಕಾರ ನ. 11ರ ವರೆಗೆ ಈ ಮೇಲಿನ ಸ್ಥಳಗಳಲ್ಲಿ ಚಲಾವಣೆ ಮಾಡಲು ಅನುಮತಿ ನೀಡಿತ್ತು. ಆದರೆ ಎಟಿಎಂ ಮತ್ತು ಬ್ಯಾಂಕ್ ಗಳಲ್ಲಿ ಹಣಗಳು ಸಕಾಲದಲ್ಲಿ ವಿತರಣೆಯಾಗದೇ ಇರುವ ಕಾರಣ ಕೇಂದ್ರ ಸರ್ಕಾರ ಈ ಗಡುವನ್ನು ಇನ್ನು ಮೂರು ದಿನಗಳ ಕಾಲ ವಿಸ್ತರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸೇಠ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಸಿಎಂ ಕಾರಿಗೆ ಮುತ್ತಿಗೆ