ಬಿಜೆಪಿ ಸಂಸದರು ಹಾಗೂ ಸಚಿವರು ಮೋದಿ ಮುಂದೆ ಮಾತನಾಡಲ್ಲ ಎಲ್ಲಿ ನಮ್ಮ ಸ್ಥಾನಗಳು ಹಾಗೂ ಅಧಿಕಾರ ಹೋಗುತ್ತೆ ಅಂತಾ ಎದುರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ರು. ರಾಮನಗರ ಜಿಲ್ಲೆಯ ಕನಕಪುರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಿ ಮುಂದೆ ಮಾತನಾಡಲು ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅವರುಗಳ ಮಾತನಾಡಲ್ಲ ಇವರಿಗೆ ಉಸಿರು ನಿಂತ್ತು ಹೋಗಿದೆ ಎಂದ್ರು. ಇನ್ನೂ ಮೇಕೆದಾಟು ವಿಚಾರದಲ್ಲಿ ಸಚಿವರುಗಳ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ, ಅವರಿಗೆ ಧೈರ್ಯ ಇದ್ರೆ ಭದ್ದತೆ ಇದ್ರೆ ಪ್ರಧಾನಮಂತ್ರಿ ಹಾಗೂ ಕೇಂದ್ರ ನೀರಾವರಿ ಸಚಿವರನ್ನ ಭೇಟಿ ಮಾಡಲಿ, ರಾಜ್ಯದ 25 ಸಂಸದರು ಹೋರಾಟ ಮಾಡಿ ಧರಣಿ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಿಸಬೇಕು ಎಂದು ಒತ್ತಾಯ ಮಾಡಿದ್ರು. ಬೆಂಗಳೂರಿನಲ್ಲಿರುವ 3 ಮಂದಿ ಸಂಸದರು ಹೋರಾಟ ಮಾಡಬೇಕು ಕಾರಣ ಈ ಯೋಜನೆಯಿಂದ ಬೆಂಗಳೂರಿನ ಜನ್ರಿಗೆ ಕುಡಿಯುವ ನೀರು ಸಿಗುತ್ತದೆ, ಈ ಯೋಜನೆಗೆ ಕ್ರೇತ್ರದ ಜನರಾಗಿ ನಾವು ತಕರಾರು ಮಾಡಬೇಕು, ನಾವೇ ಮಾಡಿ ಅಂತಾ ಹೇಳುತ್ತಿದ್ದೇವೆ ಎಷ್ಟು ಜಮೀನು ಹೋದರು ಹೋಗಲಿ ಜನ್ರನ್ನ ಒಪ್ಪಿಸುತ್ತೇನೆ ಅಂತಾ ಹೇಳಿದ್ರು. ಈ ಯೋಜನೆಯಲ್ಲಿ ವಿದ್ಯುತ್ ಛಕ್ತಿ ತಯಾರು ಮಾಡಲಾಗುತ್ತೆ ಬೇಕಿದ್ರೆ ತಮಿಳುನಾಡಿನ ಸರಕಾರ ಖರೀದಿ ಮಾಡಲಿ ಎಂದ ಅವರು ಸಚಿವ ಅಶ್ವಥ್ ನಾರಾಯಣ್ ಅವರು ಕೇಂದ್ರ ಸರಕಾರ ಮೇಕೆದಾಟು ವಿಚಾರವಾಗಿ ನಮ್ಮ ಪರ ಇದೆ ಅಂತಾ ಹೇಳಿದ್ದಾರೆ, ಈ ಒಂದು ಮಾತು ಸಾಕು ತಮಿಳುನಾಡಿನ ಸರಕಾರಕ್ಕೆ ಇದನ್ನೆ ಒಂದು ಗ್ರಿಪ್ ಹಿಡಿದುಕೊಂಡು ಕೋರ್ಟ್ ಗೆ ಅರ್ಜಿ ಸಲ್ಲಿಸಿಬಿಡುತ್ತಾರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರಕಾರ ಇದ್ರೆ ಕೆಲಸ ಹಾಗುತ್ತೆ ಅಂತಾ ಅಶ್ವಥ್ ನಾರಾಯಣ್ ಹೇಳಿದ್ರಲ್ಲ ಮಾಡಿಸಲಿ, ಅಶ್ವಥ್ ನಾರಾಯಣ್ ಅವರು ಬೇಜವಬ್ದಾರಿ ಹೇಳಿಕೆಗಳನ್ನ ಕೊಡಬಾರದು, ಅಶ್ವಥ್ ನಾರಾಯಣ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲಾ ಅವರು ಸಚಿವರು ಹೇಳಿಕೆಗಳನ್ನ ಕೊಡುವಾಗ ಜವಬ್ದಾರಿಯಾಗಿ ಮಾತನಾಡಬೇಕು ಅಂತಾ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಿಡಿ ಕಾರಿದ್ರು.
ಸಿ.ಟಿ.ರವಿ ವಿಚಾರವಾಗಿ ಮಾತನಾಡಿ ಅವರು ಯಾವುದೊ ನಶೆಯಲ್ಲಿದ್ದಾರೆ ಅವರ ಬಗ್ಗೆ ಮಾತನಾಡುವುದು ಬೇಡ ಅಂತಾ ಹೇಳಿದ್ರು.